"ನಮ್ಮನ್ನು ಈ ರೀತಿ ಅರಾಜಕತೆಯಲ್ಲಿ ಬಿಟ್ಟುಬಿಡಬೇಡಿ": ಶಾಂತಿಗೆ ಮನವಿ ಮಾಡಿದ ಅಫ್ಘಾನ್ ಕ್ರಿಕೆಟಿಗ ರಶೀದ್ ಖಾನ್

Update: 2021-08-11 06:05 GMT
Photo: twitter/@ICC

ಹೊಸದಿಲ್ಲಿ : ಅಫ್ಘಾನಿಸ್ತಾನದಿಂದ ಅಮೆರಿಕಾದ ಸೇನಾ ಪಡೆಗಳ ವಾಪಸಾತಿ ನಂತರ ಅಲ್ಲಿ ತಾಲಿಬಾನಿಗಳು ಮತ್ತು ದೇಶದ ಮಿಲಿಟರಿ ನಡುವೆ ತಾರಕಕ್ಕೇರಿದ ಸಂಘರ್ಷ ಎಲ್ಲೆಡೆ ಆತಂಕಕ್ಕೆ ಕಾರಣವಾಗಿರುವ ನಡುವೆಯೇ ಆ ದೇಶದ ಖ್ಯಾತ ಕ್ರಿಕೆಟಿಗ, ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರು ಮಂಗಳವಾರ ಟ್ವೀಟ್ ಮಾಡಿ ಶಾಂತಿಗೆ ಕರೆ ನೀಡಿದ್ದಾರೆ. ಜಾಗತಿಕ ನಾಯಕರು ತಮ್ಮ ದೇಶವಾಸಿಗಳನ್ನು ಈ ರೀತಿಯ ಅಜಾರಕತೆಯ ಸಂದರ್ಭದಲ್ಲಿ ಕೈಬಿಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

"ಪ್ರೀತಿಯ ಜಾಗತಿಕ ನಾಯಕರೇ! ನನ್ನ ದೇಶದಲ್ಲಿ ಅರಾಜಕತೆಯಿದೆ. ಸಾವಿರಾರು ಅಮಾಯಕ ಜನರು, ಮಕ್ಕಳು ಮತ್ತು  ಮಹಿಳೆಯರು ಪ್ರತಿ ದಿನ ಬಲಿಯಾಗುತ್ತಿದ್ದಾರೆ, ಮನೆಗಳು ಮತ್ತು ಆಸ್ತಿಗಳನ್ನು ನಾಶಗೊಳಿಸಲಾಗುತ್ತಿದೆ, ಸಾವಿರಾರು ಕುಟುಂಬಗಳು ನಿರ್ಗತಿಕವಾಗಿವೆ..'' ಎಂದು ಅವರು ಟ್ವೀಟ್ ಮಾಡಿದ್ದಾರೆ.

"ನಮ್ಮನ್ನು ಈ ರೀತಿ ಅರಾಜಕತೆಯಲ್ಲಿ ಬಿಟ್ಟುಬಿಡಬೇಡಿ, ಅಫ್ಘಾನೀಯರನ್ನು ಹತ್ಯೆ ಮಾಡುವುದನ್ನು ಹಾಗೂ ಅಫ್ಘಾನಿಸ್ತಾನವನ್ನು ನಾಶಪಡಿಸುವುದನ್ನು ನಿಲ್ಲಿಸಿ. ನಮಗೆ ಶಾಂತಿ ಬೇಕಿದೆ,'' ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News