ಮಹಿಳಾ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ

Update: 2021-08-12 13:29 GMT

ಉಡುಪಿ, ಆ.12: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಉಡುಪಿ ಜಿಲ್ಲೆಯಲ್ಲಿ ಕೆಳಕಂಡ ವಿವಿಧ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಉದ್ಯೋಗಿನಿ ಯೋಜನೆ: 18ರಿಂದ 55 ವರ್ಷ ವಯಸ್ಸಿನ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಎರಡು ಲಕ್ಷ ರೂ. ಆದಾಯ ಹಾಗೂ ಇತರೆ ವರ್ಗದ 1.50 ಲಕ್ಷ ಆದಾಯ ಹೊಂದಿರುವ ಮಹಿಳೆಯರು ಆದಾಯೋತ್ಪನ್ನಕರ ಚಟುವಟಿಕೆ ಕೈಗೊಳ್ಳಲು ರಾಷ್ಟ್ರೀಕೃತ ಬ್ಯಾಂಕಿನಿಂದ ನೀಡುವ ಗರಿಷ್ಠ ಮೂರು ಲಕ್ಷ ಸಾಲಕ್ಕೆ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಮಹಿಳೆಯರಿಗೆ ಗರಿಷ್ಠ ರೂ.1,50,000 ಹಾಗೂ ಇತರೆ ವರ್ಗದ ಮಹಿಳೆಯರಿಗೆ ಗರಿಷ್ಠ ರೂ. 90,000 ಸಹಾಯಧನವನ್ನು ನೀಡಲಾಗುವುದು.

ಪರಿಶಿಷ್ಠ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ: ಈ ಯೋಜನೆಯಲ್ಲಿ ಉದ್ಯೋಗಿನಿ ಯೋಜನೆಯಡಿ ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರಿಗೆ ಬ್ಯಾಂಕಿನಿಂದ ನೀಡುವ ಗರಿಷ್ಠ 3 ಲಕ್ಷ ರೂ. ಸಾಲಕ್ಕೆ ಗರಿಷ್ಠ ರೂ.1,50,000 ಸಹಾಯಧನ ನೀಡಲಾಗುವುದು.
ಕಿರುಸಾಲ ಯೋಜನೆ: ಸ್ತ್ರೀಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕನಿಷ್ಠ 2 ಲಕ್ಷ ಉಳಿತಾಯ ಹಾಗೂ ಪ್ರಸ್ತುತ ಬ್ಯಾಂಕ್ ಸಾಲ ಪಡೆಯದ ಗುಂಪುಗಳಿಗೆ ಬಡ್ಡಿ ರಹಿತ ರೂ.2 ಲಕ್ಷ ಸಾಲ ನೀಡಲಾಗುವುದು.

ಕಿರುಸಾಲ ಯೋಜನೆ: ಸ್ತ್ರೀಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕನಿಷ್ಠ 2 ಲಕ್ಷ ಉಳಿತಾಯ ಹಾಗೂ ಪ್ರಸ್ತುತ ಬ್ಯಾಂಕ್ ಸಾಲ ಪಡೆಯದ ಗುಂಪುಗಳಿಗೆ ಬಡ್ಡಿ ರಹಿತ ರೂ.2 ಲಕ್ಷ ಸಾಲ ನೀಡಲಾಗುವುದು. ಧನಶ್ರೀ ಯೋಜನೆ: 18ರಿಂದ 60 ವರ್ಷ ವಯೋಮಿತಿಯ ಎಚ್‌ಐವಿ ಸೋಂಕಿತ ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳಲು ರೂ.30,000ಗಳ ಪ್ರೋತ್ಸಾಹಧನ ನೀಡಲಾಗುವುದು.
ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ: 18ರಿಂದ 60 ವರ್ಷ ವಯೋಮಿತಿಯ ಸಮುದಾಯದವರು ಸ್ವ-ಉದ್ಯೋಗ ಕೈಗೊಳ್ಳಲು 30000 ರೂ.ಗಳ ಪ್ರೋತ್ಸಾಹಧನ ನೀಡಲಾಗುವುದು.

ಈ ಎಲ್ಲಾ ಯೋಜನೆಗಳ ಕುರಿತು ಅರ್ಜಿಗಳನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಸೆ.4ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಜತಾದ್ರಿ ಮಣಿಪಾಲ(ದೂರವಾಣಿ:0820-2574978)ಇವರನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News