​ಪಶುಪಾಲನಾ ಇಲಾಖೆಯಿಂದ ಪಶುಪಾಲನಾ ಇಲಾಖೆಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ

Update: 2021-08-12 18:02 GMT

ಉಡುಪಿ, ಆ.12:2021-22ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಶೇ.90 ಸಹಾಯಧನವನ್ನು ಶೇ.10 ಫಲಾನುಭವಿಗಳಿಗೆ ವಂತಿಗೆಯೊಂದಿಗೆ ಹಾಲು ಕರೆಯುವ ಯಂತ್ರ ಮತ್ತು ರಬ್ಬರ್ ನೆಲದ ಹಾಸುಗಳ ಪರಿಕರಗಳನ್ನು ವಿತರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಫಲಾನುಭವಿಗಳ ಆಯ್ಕೆಗೆ ಅರ್ಜಿಗಳನ್ನು ಆಹ್ವಾನಿಸ ಲಾಗಿದೆ.

ಕನಿಷ್ಠ 2 ಮಿಶ್ರತಳಿ ಹಸುಗಳನ್ನು ಹೊಂದಿರುವ, ಪ.ಜಾತಿ/ಪ.ಪಂಗಡದ ಆಸಕ್ತ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಹ ಫಲಾನು ಭವಿಗಳು ತಮ್ಮ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳಿಂದ ಅರ್ಜಿ ನಮೂನೆ ಪಡೆದು ಆ.19ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳು ಪಶು ಆಸ್ಪತ್ರೆ, ಉಡುಪಿ (0820-2520659), ಕಾಪು (0820-2551175), ಬ್ರಹ್ಮಾವರ (0820-2561101), ಕುಂದಾಪುರ (08254-230776), ಬೈಂದೂರು (08254-251076), ಕಾರ್ಕಳ (08258-230448) ಮತ್ತು ಹೆಬ್ರಿ (08253-251203)ಇವರನ್ನು ಸಂಪರ್ಕಿಸುವಂತೆ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News