ಸರಕಾರ ಇನ್ನೂ ಟೇಕಾಫ್ ಆಗಲೇ ಇಲ್ಲ: ಕಾಂಗ್ರೆಸ್ ಟೀಕೆ
ಬೆಂಗಳೂರು, ಆ.13: ರಾಜ್ಯವನ್ನು ಕೊರೋನ 3ನೇ ಅಲೆಯ ಆತಂಕ ಕಾಡುತ್ತಿರುವಾಗ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾದ ಸರಕಾರ ಇನ್ನೂ ಟೇಕಾಫ್ ಆಗಲೇ ಇಲ್ಲ, ಸಚಿವರು ತಮ್ಮ ಕೆಲಸ ಶುರು ಮಾಡಲಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಂತರಿಕ ಕಿತ್ತಾಟಗಳ ಸಂಧಾನ ಸಭೆಗಳಲ್ಲಿಯೇ ತಮ್ಮ ಅಧಿಕಾರವಧಿಯನ್ನ ಕಳೆಯುತ್ತಿದ್ದಾರೆ. ಬಿಜೆಪಿ ಕೊರೋನಗಿಂತಲೂ ಭೀಕರ ಸೋಂಕು ಎಂದು ಹೇಳಿದೆ.
ಚಿಕ್ಕಮಗಳೂರಿನ ಮೂಡಿಗೆರೆಗೆ ನೆರೆ ಪರಿಹಾರವಿಲ್ಲ ಎಂದು ಬಿಜೆಪಿ ಶಾಸಕ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದರೆ, ಅದೇ ಜಿಲ್ಲೆಯ ಸಿ.ಟಿ.ರವಿ 'ಚೆಂಡು ಹೂವಿನ ಗಿಡ' ಸೇವಿಸಿ ಬಾಯಿಗೆ ಬಂದಂತೆ ಮಾತಾಡುತ್ತಾ ತಿರುಗುತ್ತಿದ್ದಾರೆ. ತನ್ನ ಜಿಲ್ಲೆಗೆ ನ್ಯಾಯ ಒದಗಿಸುವ ಕೆಲಸ ಮಾಡುವುದು ಅವರ ಆದ್ಯತೆ ಅಲ್ಲವೇ ಅಲ್ಲ ಎಂದು ಟೀಕಿಸಿದೆ.
ಕರೋನಾ 3ನೇ ಅಲೆಯ ಆತಂಕ ಕಾಡುತ್ತಿರುವಾಗ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾದ ಸರ್ಕಾರ ಇನ್ನೂ ಟೇಕಾಫ್ ಆಗಲೇ ಇಲ್ಲ, ಸಚಿವರು ತಮ್ಮ ಕೆಲಸ ಶುರು ಮಾಡಲಿಲ್ಲ.
— Karnataka Congress (@INCKarnataka) August 13, 2021
ಸಿಎಂ @BSBommai ಅವರು ಆಂತರಿಕ ಕಿತ್ತಾಟಗಳ ಸಂಧಾನ ಸಭೆಗಳಲ್ಲಿಯೇ ತಮ್ಮ ಅಧಿಕಾರವಧಿಯನ್ನ ಕಳೆಯುತ್ತಿದ್ದಾರೆ.
ಬಿಜೆಪಿ ಪಕ್ಷ ಕರೊನಾಗಿಂತಲೂ ಭೀಕರ ಸೋಂಕು.#ಜನವಿರೋಧಿಬಿಜೆಪಿ