ಅಪ್ರಾಪ್ತ ವಯಸ್ಕ ಬಾಲಕಿ ತಂದೆಯೊಂದಿಗೆ ಶಬರಿಮಲೆಗೆ ತೆರಳಲು ಹೈಕೋರ್ಟ್ ಅಸ್ತು

Update: 2021-08-17 15:26 GMT

ಕೊಚ್ಚಿ,ಆ.17: ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳು ದರ್ಶನಕ್ಕಾಗಿ ತನ್ನ ತಂದೆಯ ಜೊತೆ ಶಬರಿಮಲೆ ಕ್ಷೇತ್ರಕ್ಕೆ ತೆರಳಲು ಕೇರಳ ಉಚ್ಚ ನ್ಯಾಯಲಯವು ಮಂಗಳವಾರ ಅನುಮತಿ ನೀಡಿದೆ. ಈ ವರ್ಷದ ಎಪ್ರಿಲ್ ನಲ್ಲಿ ತಾನು ಹೊರಡಿಸಿದ್ದ ಇಂತಹುದೇ ಆದೇಶ ಮತ್ತು ಮಕ್ಕಳು ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ವ್ಯಕ್ತಿಗಳ ಎಲ್ಲ ಚಟುವಟಿಕೆಗಳಲ್ಲಿ ಜೊತೆಯಲ್ಲಿರಬಹುದು ಎಂಬ ರಾಜ್ಯ ಸರಕಾರದ ಆ.4ರ ಆದೇಶದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯವು ಈ ಅನುಮತಿಯನ್ನು ನೀಡಿದೆ.

ತನ್ನ ತಂದೆ ಆ.23ರಂದು ಶಬರಿಮಲೆಗೆ ಯಾತ್ರೆ ಕೈಗೊಳ್ಳುತ್ತಿದ್ದು,ಅವರ ಜೊತೆ ತೆರಳಲು ತನಗೆ ಅನುಮತಿ ನೀಡುವಂತೆ ಕೋರಿ ಒಂಭತ್ತರ ಹರೆಯದ ಬಾಲಕಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.

ತನಗೆ ಹತ್ತು ವರ್ಷವಾಗುವ ಮೊದಲೇ ಶಬರಿಮಲೆಗೆ ಭೇಟಿ ನೀಡಲು ಬಾಲಕಿ ಬಯಸಿದ್ದಾಳೆ. ಆ ಬಳಿಕ ಶಬರಿಮಲೆಗೆ ಭೇಟಿ ನೀಡಲು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಆಕೆ ಕಾಯಬೇಕಾಗುತ್ತದೆ ಎಂದು ಬಾಲಕಿಯ ಪರ ವಕೀಲರು ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News