ಗಲ್ಫ್ ಮೆಡಿಕಲ್ ಯೂನಿವರ್ಸಿಟಿಗೆ ಜಾಗತಿಕ ಗುಣಮಟ್ಟದ ಮಾನ್ಯತೆ

Update: 2021-08-19 11:56 GMT

ದುಬೈ : ಉನ್ನತ ಶಿಕ್ಷಣಕ್ಕಾಗಿನ ಗುಣಮಟ್ಟದ ಖಾತರಿ ಏಜೆನ್ಸಿ (ಕ್ಯುಎಎ)ಯಿಂದ ಜಾಗತಿಕ ಮಟ್ಟದ ಮಾನ್ಯತೆಯನ್ನು ಪಡೆದ ಸಂಸ್ಥೆಗಳ ಸಾಲಿಗೆ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಇದೀಗ ಸೇರ್ಪಡೆಗೊಂಡಿದೆ.

ಕ್ಯುಎಎನ ಕಟ್ಟುನಿಟ್ಟಾದ ಅಂತಾರಾಷ್ಟ್ರೀಯ ಗುಣಮಟ್ಟ ಪರಾಮರ್ಶೆ (ಐಕ್ಯೂಆರ್)ಯಲ್ಲಿ ಉತ್ತೀರ್ಣವಾದ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಈ ಜಾಗತಿಕ ಮಾನ್ಯತೆಯನ್ನು ನೀಡಲಾಗುತ್ತದೆ.

ಯುರೋಪಿಯನ್ ಉನ್ನತ ಶಿಕ್ಷಣ ಕ್ಷೇತ್ರ (ಇಎಸ್‌ಜಿ)ದಲ್ಲಿನ ಮಾನದಂಡಗಳು ಹಾಗೂ ಮಾರ್ಗಸೂಚಿಗಳ ಭಾಗ 1ರಲ್ಲಿ ನಿಗದಿಪಡಿಸಲಾದ ಅಂತಾರಾಷ್ಟ್ರೀಯ ಗುಣಮಟ್ಟದ ಖಚಿತ ಮಾನದಂಡಗಳ ಆಧಾರದಲ್ಲಿ ಜಾಗತಿಕ ಸಂಸ್ಥೆಗಳ ಮೌಲ್ಯಮಾಪನವನ್ನು ನಡೆಸಲಾಗುತ್ತದೆ.

2021ರ ಎಪ್ರಿಲ್‌ನಲ್ಲಿ  ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಓರ್ವ ಅಂತಾರಾಷ್ಟ್ರೀಯ ಪರಿಣಿತ ಹಾಗೂ ಇನ್ನೋರ್ವ ವಿದ್ಯಾರ್ಥಿ ವಿಮರ್ಶಕ ಸೇರಿದಂತೆ ಮೂವರು ಸ್ವತಂತ್ರ ವಿಮರ್ಶಕರು ಸಮೀಕ್ಷೆ ನಡೆಸಿದ್ದರು. ಅವರ ತೀರ್ಮಾನದ ಆಧಾರದಲ್ಲಿ ಸ್ವತಂತ್ರ ಪರಾಮರ್ಶನಾ ತಂಡಗಳು ಇಎಸ್‌ಜಿಯ ಎಲ್ಲಾ 10 ಮಾನದಂಡಗಳನ್ನು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಈಡೇರಿಸಿರುವುದನ್ನು ದೃಢಪಡಿಸಿದೆ.

ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಹಲವಾರು ಉತ್ತಮ ವ್ಯವಸ್ಥೆಗಳನ್ನು ಪರಾಮರ್ಶನಾ ತಂಡವು ಗುರುತಿಸಿದೆ.

1. ಬಾಹ್ಯ ಪರೀಕ್ಷಕರ ಪರಿಣಾಮಕಾರಿ ಬಳಕೆ ಹಾಗೂ ಬಾಹ್ಯ ಬೆಂಚ್‌ಮಾರ್ಕಿಂಗ್ ಖಾತರಿಪಡಿಸುವಿಕೆ.

2. ಒಟ್ಟಾರೆ ಕಲಿಕಾ ಅನುಭವದ ಕುರಿತು ಸಕಾರಾತ್ಮಕವಾಗಿ ಪರಿಣಾಮ ಬೀರಿದೆ.

3. ಜಿಎಂಯವಿನ ಗುಣಮಟ್ಟದ ಖಾತರಿ ಹಾಗೂ ಸಾಂಸ್ಥಿಕ ಪರಿಣಾಮಕಾರಿತ್ವದ ವೆಬ್‌ಸೈಟ್ ಪೋರ್ಟಲ್ ಎಲ್ಲಾ ಸ್ತರದ ದತ್ತಾಂಶಗಳು ಹಾಗೂ ಮಾಹಿತಿಗಳನ್ನು ಸುಲಭವಾಗಿ ಪಡೆಯಲು ಅವಕಾಶ ನೀಡುತ್ತದೆ.

‘‘ಗಲ್ಫ್ ಮೆಡಿಕಲ್ ಯೂನಿವರ್ಸಿಟಿ(ಜಿಎಂಯು)ಗೆ ಗುಣಮಟ್ಟದ ಖಾತರಿ ಏಜೆನ್ಸಿ ವಿಶೇಷ ಮಾನ್ಯತೆಯನ್ನು ನೀಡಿರುವುದು ವಿಶ್ವವಿದ್ಯಾನಿಲಯದ ಇತಿಹಾಸದ ಅತ್ಯಂತ ಮಹತ್ವದ ಮೈಲುಗಲ್ಲಾಗಿದೆ. ಇಎಸ್‌ಜಿಯ ಎಲ್ಲಾ 10 ಮಾನದಂಡಗಳನ್ನು ಜಿಎಂಯು ಈಡೇರಿಸಿರುವುದಾಗಿ ವರದಿ ತಿಳಿಸಿರುವುದು ನಮಗೆ ಸಂತೃಪ್ತಿ ತಂದಿದೆ. ಸುಧಾರಣೆಗಾಗಿ ಕೆಲವು ಯೋಗ್ಯವಾದ ಸಲಹೆಗಳನ್ನು ನೀಡಿರುವುದು ಖಂಡಿತವಾಗಿಯೂ ನಮಗೆ ಇನ್ನಷ್ಟು ಅಭಿವೃದ್ದಿ’’ ಹೊಂದಲು ನೆರವಾಗಲಿದೆ ಎಂದು ಜಿಎಂಯು ಚಾನ್ಸಲರ್ ಪ್ರೊ. ಹೊಸ್ಸಾಮ್ ಹಾಮ್ದಿ ತಿಳಿಸಿದ್ದಾರೆ.

‘‘ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪದ್ಧತಿಗಳ ಎಲ್ಲಾ ಮಾನದಂಡಗಳನ್ನು ತಾನು ಈಡೇರಿಸಿರುವುದನ್ನು ತೋರಿಸಿಕೊಟ್ಟಿರುವುದು ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅದ್ಬುತ ಸಾಧನೆಯಾಗಿದೆ’’ ಎಂದು ಕ್ಯುಎಎ ಕಾರ್ಯಾಚರಣೆಗಳ ವಿಶೇಷ ನಿರ್ದೇಶಕ ಹಾಗೂ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಿ ಸ್ಟಾಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News