ಡಿಪ್ಲೋಮಾ `ಪ್ರಿಂಟಿಂಗ್ ಟೆಕ್ನಾಲಜಿ' ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ

Update: 2021-08-20 12:56 GMT

ಬೆಂಗಳೂರು, ಆ. 19: ಎಸೆಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.35ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ವಿದ್ಯಾರ್ಥಿಗಳಿಂದ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರಿಂಟಿಂಗ್ ಟೆಕ್ನಾಲಜಿ ಕೋರ್ಸ್ ಪ್ರವೇಶಕ್ಕೆ ಅಭ್ಯರ್ಥಿಗಳಿಂದ ಸರಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ ಅರ್ಜಿ ಆಹ್ವಾನಿಸಿದೆ.

ಶಿಸ್ತಿನೊಂದಿಗೆ ಶಿಕ್ಷಣ, ನುರಿತ ಹಾಗೂ ದಕ್ಷತೆಯ ಸೇವಾ ಮನೋಭಾವವುಳ್ಳ ಶಿಕ್ಷಕ ವರ್ಗ, ಉತ್ತಮ ಗ್ರಂಥಾಲಯ ಸೌಲಭ್ಯ, ಪ್ರಯೋಗಾಲಯ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ, ಉತ್ತಮ ದರ್ಜೆಯಲ್ಲಿ ತೇರ್ಗಡೆಯೊಂದಿಗೆ ವಿದ್ಯಾರ್ಥಿಗಳಿಗೆ ಖಚಿತ ಉದ್ಯೋಗಾವಕಾಶ, ಡಿಪ್ಲೋಮಾ ತೇರ್ಗಡೆ ಬಳಿಕ ನೇರವಾಗಿ ಇಂಜಿನಿಯರಿಂಗ್ ಪ್ರವೇಶ ಅವಕಾಶವಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು ನಗರದ ಹೃದಯ ಭಾಗದ ಅರಮನೆ ರಸ್ತೆಯಲ್ಲಿರುವ ಸರಕಾರ ಮುದ್ರಣ ತಂತ್ರಜ್ಞಾನ ಸಂಸ್ಥೆಯು ರಾಜ್ಯದ ಏಕೈಕ ಸರಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಾಗಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುದ್ರಣ ಉದ್ಯಮ ಕ್ಷೇತ್ರಕ್ಕೆ ಕೊಡುಗೆ ನೀಡುವ ಖ್ಯಾತಿಗಳಿಸಿದ ಸಂಸ್ಥೆಯಾಗಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ದೂರವಾಣಿ ಸಂಖ್ಯೆ-080-2225 3914, ಮೊಬೈಲ್-94483 15326, 97431 27641 ಸಂಪರ್ಕಿಸಲು ಸರಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ ಪ್ರಾಚಾರ್ಯರಾದ ಡಾ.ವಿಜಯ್ ಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News