ನಿರಾಶ್ರಿತರು ಒಳಬರಲು ಗಡಿಗಳನ್ನು ತೆರೆದಿಡಿ: ಅಫ್ಘಾನ್ ನೆರೆದೇಶಗಳಿಗೆ ವಿಶ್ವಸಂಸ್ಥೆ ಆಗ್ರಹ

Update: 2021-08-20 14:29 GMT

 ವಿಶ್ವಸಂಸ್ಥೆ, ಆ.20: ಅಫ್ಘಾನ್ ನಾಗರಿಕರಲ್ಲಿ ಹೆಚ್ಚಿನವರು ಕ್ರಮಬದ್ಧ ವ್ಯವಸ್ಥೆಯ ಮೂಲಕ ದೇಶದಿಂದ ಹೊರಹೋಗಲು ಅಸಮರ್ಥರಾಗಿದ್ದಾರೆ. ಹಂತಹಂತವಾಗಿ ಹೆಚ್ಚುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಅಪಾಯದಲ್ಲಿರುವವರಿಗೆ ನೆರವಾಗಲು ಅಫ್ಘಾನ್ನ ನೆರೆ ದೇಶಗಳು ತಮ್ಮ ಗಡಿಭಾಗಗಳನ್ನು ತೆರೆದಿಡಬೇಕು ಎಂದು ವಿಶ್ವಸಂಸ್ಥೆಯ ಯುಎನ್ಎಚ್ಸಿಆರ್ ವಕ್ತಾರೆ ಶಬಿಯಾ ಮಂಟೂ ಆಗ್ರಹಿಸಿದ್ದಾರೆ.

ಅಮೆರಿಕವು ಅಫ್ಘಾನ್ನಿಂದ 3 ಸಾವಿರಕ್ಕೂ ಹೆಚ್ಚು ಜನರನ್ನು ಅಫ್ಘಾನ್ನಿಂದ ತೆರವುಗೊಳಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ ಈ ಉಪಕ್ರಮ ತುರ್ತು ಮತ್ತು ವ್ಯಾಪಕ ಅಂತರಾಷ್ಟ್ರೀಯ ಮಾನವೀಯ ನೆರವಿನ ಕ್ರಮಗಳಿಗೆ ಪರ್ಯಾಯವಾಗದು ಎಂದು ಯುನೈಟೆಡ್ ನೇಷನ್ಸ್ ಹೈಕಮಿಷನರ್ ಫಾರ್ ರೆಫ್ಯೂಜೀಸ್(ಯುಎನ್ಎಚ್ಸಿಆರ್) ವಕ್ತಾರೆ ಶಬಿಯಾ ಹೇಳಿದ್ದಾರೆ.

ಈ ಮಧ್ಯೆ, ಅಫ್ಘಾನ್ನಲ್ಲಿ ಅಮೆರಿಕ ಮತ್ತು ನೇಟೊ ಪಡೆಗಳ ಜತೆಗೆ ಕೆಲಸ ಮಾಡಿದ್ದವರನ್ನು ಹುಡುಕಲು ತಾಲಿಬಾನ್ಗಳು ಮನೆಗೆ ನುಗ್ಗಿ ಶೋಧ ನಡೆಸುತ್ತಿರುವುದು, ಪ್ರತೀಕಾರದ ಭೀತಿಯನ್ನು ಹೆಚ್ಚಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News