×
Ad

ಮಾಸ್ಕ್ ಉಲ್ಲಂಘನೆ ಪ್ರಕರಣ: ಹಬ್ಬದಂದೇ 2 ಲಕ್ಷ ರೂ. ದಂಡ ವಸೂಲಿ

Update: 2021-08-21 22:57 IST

ಬೆಂಗಳೂರು, ಆ.21: ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಸಂಬಂಧ ವರಮಹಾಲಕ್ಷ್ಮೀ ಹಬ್ಬದಂದೇ 2.17 ಲಕ್ಷ ರೂ. ದಂಡವನ್ನು ಬಿಬಿಎಂಪಿ ಮಾರ್ಷಲ್‍ಗಳು ವಸೂಲಿ ಮಾಡಿದ್ದಾರೆ.

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ, ಮಾರುಕಟ್ಟೆ, ವಾಣಿಜ್ಯ ಕೇಂದ್ರ ಪ್ರದೇಶಗಳಲ್ಲಿ ಹೆಚ್ಚು ಜನ ಜಮಾವಣೆಗೊಂಡಿದ್ದರು. ಈ ಸಂದರ್ಭದಲ್ಲಿ ಮಾಸ್ಕ್ ಧರಿಸುವುದನ್ನು ಮರೆತು ಓಡಾಡಿದ್ದ ಆರೋಪ ಸಂಬಂಧ ಒಟ್ಟು 868 ಪ್ರಕರಣಗಳಿಂದ, 2.17 ಲಕ್ಷ ರೂ. ದಂಡ ವಿಧಿಸಲಾಗಿದೆ.

ಈ ಪೈಕಿ ಬಿಬಿಎಂಪಿ ವಾರ್ಡ್ ಮಾರ್ಷಲ್‍ಗಳು 1,09,500 ರೂ. ಹೆಚ್ಚುವರಿ ಮಾರ್ಷಲ್ಸ್‍ಗಳು 1,07,500 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.ಅಲ್ಲದೆ, ಮೇ ತಿಂಗಳಿಂದ ಆ. 20ರವರೆಗೆ 5,37,908 ಪ್ರಕರಣಗಳಿಂದ 12,87,79,825 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಮಾಸ್ಕ್ ಉಲ್ಲಂಘಿಸಿದವರಲ್ಲಿ ಪೂರ್ವ, ಪಶ್ಚಿಮ, ದಕ್ಷಿಣ ವಲಯದವರೇ ಹೆಚ್ಚಿದ್ದು, ಪೂರ್ವ ವಲಯದಲ್ಲಿ 180, ಪಶ್ಚಿಮ 256, ದಕ್ಷಿಣ ವಲಯ 165 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News