×
Ad

ವಂಚನೆ ಆರೋಪ: ಬೃಂದಾವನ ಪ್ರಾಪರ್ಟೀಸ್ ವಿರುದ್ಧ ದೂರು

Update: 2021-08-21 23:08 IST

ಬೆಂಗಳೂರು, ಆ.21: ವಂಚನೆ ಆರೋಪ ಸಂಬಂಧ ಬೃಂದಾವನ ಪ್ರಾಪರ್ಟೀಸ್ ವಿರುದ್ಧ ಬರೋಬ್ಬರಿ 3,800 ದೂರುಗಳು ಕೇಳಿಬಂದಿದ್ದು, 86 ಕೋಟಿ ರೂ. ನಷ್ಟವಾಗಿರುವ ಮಾಹಿತಿ ತನಿಖೆಯಲ್ಲಿ ಗೊತ್ತಾಗಿದೆ.

ಇಲ್ಲಿನ ತಾವರೆಕೆರೆ, ಮಾಗಡಿ ರೋಡ್, ನೆಲಮಂಗಲ ಹಾಗೂ ಕಗ್ಗಲಿಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ಕಂಪೆನಿಯು ಜನರಿಂದ 1ರಿಂದ 5 ಲಕ್ಷದವರೆಗೆ ಹಣ ವಸೂಲಿ ಮಾಡಿತ್ತು ಎನ್ನಲಾಗಿದೆ.

ಹಣ ನೀಡಿದ ಬಳಿಕ ನಿವೇಶನ ಕೇಳಿದರೆ ನೀಡಬೇಕಾಗಿರುವ ಬಡಾವಣೆ ಜಾಗ ಅಭಿವೃದ್ದಿಪಡಿಸುತ್ತಿದ್ದು, ಮುಗಿದ ಬಳಿಕ ನೀಡಲಾಗುವುದು ಎಂದು ಭರವಸೆ ನೀಡಿತ್ತು. ಆದರೆ, ಹಲವು ದಿನಗಳು ಕಳೆದರೂ ಯಾವುದೇ ನಿವೇಶನ, ಭೂಮಿ ನೀಡದೆ ವಂಚನೆಗೈದಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News