ಬೆಂಗಳೂರು: ಆಹಾರ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಪ್ರಕರಣ; ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

Update: 2021-08-24 17:29 GMT

ಬೆಂಗಳೂರು,ಆ.24- ನಗರದ ಎಂ.ಎಂ. ಆಹಾರ ತಯಾರಿಕಾ  ಕಾರ್ಖಾನೆಯಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸಚಿನ್ ಹಾಗೂ ಧನಲಕ್ಷ್ಮಿ‌ ಎಂಬುವವರು ಸಾವಿಗೀಡಾಗಿದ್ದಾರೆ‌ ಎಂದು ತಿಳಿದುಬಂದಿದೆ.

ಸೋಮವಾರ ಸೌರಬ್ ಮತ್ತು ಮನೀಶ್ ಎಂಬುವರು ಸಾವಿಗೀಡಾಗಿದ್ದರು.ಗಂಭೀರ ಗಾಯಗೊಂಡಿದ್ದ ಮತ್ತಿಬ್ಬರು ಇಂದು ಮುಂಜಾನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮತ್ತೊಂದೆಡೆ, ಎಂಎಂ ಆಹಾರ ಕಾರ್ಖಾನೆಯ ಬಾಯ್ಲರ್ ನಲ್ಲಿ ಹೆಚ್ಚಿನ ಉಷ್ಣಾಂಶ ಉಂಟಾಗಿ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಮಾಗಡಿ ರಸ್ತೆ ಠಾಣೆ ಪೊಲೀಸರು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಎಫ್‍ಎಸ್‍ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಕಾರ್ಖಾನೆಯನ್ನು ಸಚಿನ್ ಮತ್ತು ವಿಜಯ್‍ಮೆಹ್ತಾ ಪಾಲುದಾರರಾಗಿ ನಡೆಸುತ್ತಿದ್ದರು. ಕಾರ್ಖಾನೆ ನಡೆಸುತ್ತಿದ್ದ ಪಾಲುದಾರ ಹಾಗೂ ಕಟ್ಟಡದ ಮಾಲೀಕನ ವಿರುದ್ಧ ಮಾಗಡಿ ರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News