×
Ad

ಡಾ.ವಿಶ್ವನಾಥ್ ಶೆಟ್ಟಿ

Update: 2021-08-30 21:14 IST

ಶಿರ್ವ, ಆ. 30: ಉತ್ತರ ಕನ್ನಡ ಜಿಲ್ಲೆ ಮಂಕಿಯ ಖ್ಯಾತ ವೈದ್ಯ, ಮೂಲತಃ ಶಿರ್ವ ಕೋಡುಮನೆ ನಿವಾಸಿ ಡಾ.ವಿಶ್ವನಾಥ್ ಶೆಟ್ಟಿ (68) ರವಿವಾರ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ತಾಯಿ, ಪತ್ನಿ, ಪುತ್ರ ಮಣಿಪಾಲ ಕೆ.ಎಂಸಿಯ ವೈದ್ಯ ಡಾ.ಗಣೇಶ್ ವಿ.ಶೆಟ್ಟಿ, ಪುತ್ರಿ ಬೆಹರಿನ್‌ನಲ್ಲಿರುವ ವೈದ್ಯೆ ಡಾ.ಪ್ರಿಯದರ್ಶಿನಿ, ಸಹೋದರ ಸಮಾಜಸೇವಕ ಕೋಡು ಸದಾನಂದ ಶೆಟ್ಟಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮಂಕಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಬುಲೆಟ್ ಬೈಕ್‌ನಲ್ಲಿ ಮನೆ, ಮನೆಗೆ ತೆರಳಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಇವರು ಪರಿಸರದಲ್ಲೇ ಶೆಟ್ಟಿ ಡಾಕ್ಟರ್ ಎಂದೇ ಖ್ಯಾತರಾಗಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಶಿರ್ವದಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News