ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ವ್ಯತ್ಯಯ
Update: 2021-08-30 22:38 IST
ಬೆಂಗಳೂರು, ಆ.30: ಇಂಧನ ದರ ಪ್ರತಿನಿತ್ಯ ವ್ಯತ್ಯಯದಿಂದಾಗಿ ವಾಹನ ಸವಾರರು ಕಂಗೆಟ್ಟಿದ್ದಾರೆ. ಆ.30ರಂದು ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಪೆಟ್ರೋಲ್ ಒಂದು ಲೀಟರ್‍ಗೆ 107 ರೂ. ಗಡಿ ದಾಟಿದೆ.
ಇಲ್ಲಿ ಡೀಸೆಲ್ ಬೆಲೆಯೂ 96 ರೂ.ಗಿಂತ ಹೆಚ್ಚಿದೆ. ಆ.29ರಂದು ಪೆಟ್ರೋಲ್ 107 ರೂ.ಗಿಂತ ಹೆಚ್ಚು ಇದ್ದ ಉತ್ತರ ಕನ್ನಡ ಜಿಲ್ಲ್ಲೆಯಲ್ಲಿ ಆ.30ರಂದು 1.77 ರೂ.ನಷ್ಟು ಇಳಿಕೆಯಾಗಿದೆ.
ಡೀಸೆಲ್ ದರ ಕೂಡ ಒಂದೂವರೆ ರೂ.ನಷ್ಟು ಇಳಿಕೆಯಾಗಿ ಒಂದು ಲೀಟರ್‍ಗೆ 95 ರೂ.ಗಿಂತ ಕಡಿಮೆ ಬೆಲೆಗೆ ಬಂದಿದೆ. ಬೆಂಗಳೂರು, ಧಾರವಾಡ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಯಥಾಸ್ಥಿತಿಯಲ್ಲಿವೆ. ಉತ್ತರ ಕನ್ನಡದ ಜೊತೆಗೆ ಚಿಕ್ಕಮಗಳೂರು, ಹಾವೇರಿ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಯಚೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‍ಗಳಲ್ಲಿ ಇಳಿಕೆಯಾಗಿದೆ.