×
Ad

ಬೆಂಗಳೂರು: ನಗರದಲ್ಲಿ ಮತ್ತೊಂದು ಹೊಸ ಪೊಲೀಸ್ ಠಾಣೆ

Update: 2021-09-01 18:27 IST

ಬೆಂಗಳೂರು, ಸೆ.1: ಇಲ್ಲಿನ ಪಶ್ಚಿಮ ವಿಭಾಗದ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಸರಸ್ವತಿ ನಗರಕ್ಕೆ ನೂತನ ಪೊಲೀಸ್ ಠಾಣೆ ಅನ್ನು ಮಂಜೂರು ಮಾಡಲಾಗಿದೆ.

ಗಂಭೀರ ಅಪರಾಧ ಪ್ರಕರಣ ಸಂಖ್ಯೆ ಗಣನೀಯ ಏರಿಕೆ ಹಿನ್ನೆಲೆ ವಿಜಯನಗರ ಠಾಣೆಯನ್ನು ವಿಭಜಿಸಿ, ನೂತನ ಪೊಲೀಸ್ ಠಾಣೆ ತೆರೆಯಲು ಮನವಿ ಮಾಡಲಾಗಿತ್ತು. ಈ ಹಿನ್ನೆಲೆ ಸರಸ್ವತಿ ನಗರದಲ್ಲಿ ಹೊಸ ಪೊಲೀಸ್ ಠಾಣೆ ತೆರೆಯಲು ಸರಕಾರ ಆದೇಶ ಹೊರಡಿಸಿದೆ

ಅಲ್ಲದೆ, ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ, ಮೊಬೈಲ್ ಅಪಹರಣ, ಸರಗಳ್ಳತನ, ವಾಹನ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಜೊತೆಗೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಮಂದಿ ರೌಡಿಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News