ಬಿಬಿಎಂಪಿ ಹುಚ್ಚಾಟದ ತೀರ್ಮಾನ ಕೈಬಿಡದಿದ್ದರೆ ಬೀದಿಗಿಳಿಯಬೇಕಾಗುತ್ತದೆ: ಅನಂತ ಸುಬ್ಬರಾವ್ ಎಚ್ಚರಿಕೆ

Update: 2021-09-01 18:12 GMT

ಬೆಂಗಳೂರು, ಸೆ. 1: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಗಮನಹರಿಸಬೇಕಾದ ಬಹಳಷ್ಟು ಸಮಸ್ಯೆಗಳಾದ ಗುಂಡಿಬಿದ್ದ ರಸ್ತೆ, ಬೀದಿನಾಯಿಗಳ ಉಪಟಳ, ವ್ಯಾಕ್ಸಿನ್ ಕೊರತೆ, ಬೆಟ್ಟಗಳಂತೆ ಬೀದಿಗಳಲ್ಲಿ ಬಿದ್ದಿರುವ ಕಸದ ರಾಶಿಗಳಿಂದ ಜನತೆ ಬಸವಳಿದಿದೆ. ಅವುಗಳ ಪರಿಹಾರಕ್ಕೆ ಬಿಬಿಎಂಪಿ ಆದ್ಯತೆ ನೀಡುವುದು ಅಗತ್ಯ. ಚುನಾಯಿತ ಪ್ರತಿನಿಧಿಗಳಿಲ್ಲದ ಸಂದರ್ಭದಲ್ಲಿ ಬಿಬಿಎಂಪಿ ನಾಡಿನ ಗಣ್ಯರ ಪುತ್ಥಳಿಗಳನ್ನು ತೆರವುಗೊಳಿಸುವ ತೀರ್ಮಾನ ಸರಿಯಲ್ಲ' ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಖಂಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಸ್ಥಾಪಿಸಿರುವ ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಶಂಕರನಾಗ್ ಮತ್ತಿತರ ಸಾಂಸ್ಕøತಿಕ ಲೋಕದ ದಿಗ್ಗಜರು ಮತ್ತು ಅಂಬೇಡ್ಕರ್, ಗಾಂಧೀಜಿ, ನೆಹರೂ, ಇಂದಿರಾಗಾಂಧಿ ಸೇರಿದಂತೆ ಮೊದಲಾದ ಲೋಕನಾಯಕರ ಪುತ್ಥಳಿಗಳ ನೆಲಸಮವಾಗಲಿವೆ. ಆದರೆ, ಅವರ್ಯಾರಿಗೂ ತಮ್ಮ ಪುತ್ಥಳಿಯನ್ನು ಮಾಡಿಸುವಂತೆ ಬೇಡಿರಲಿಲ್ಲ. ಪಾಲಿಕೆ ತನ್ನ ಹುಚ್ಚಾಟದ ತೀರ್ಮಾನವನ್ನು ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಅಂತಹ ಪರಿಸ್ಥಿತಿಗೆ ಅವಕಾಶ ನೀಡದೆ ಈ ಪ್ರಸ್ತಾವಿತ ಕ್ರಮವನ್ನು ಕೂಡಲೇ ಹಿಂಪಡೆಯಬೇಕು ಎಂದು ಅನಂತಸುಬ್ಬರಾವ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News