ಯುಎಸ್ ಓಪನ್: ಮೊದಲ ಸುತ್ತಿನಲ್ಲೇ ಸಾನಿಯಾ ಜೋಡಿಗೆ ಆಘಾತ

Update: 2021-09-03 03:55 GMT

ನ್ಯೂಯಾರ್ಕ್ : ಎರಡು ಬಾರಿಯ ಚಾಂಪಿಯನ್ ಭಾರತದ ಸಾನಿಯಾ ಮಿರ್ಜಾ ಹಾಗೂ ಡಬಲ್ಸ್ ಜತೆಗಾರ್ತಿ ಕೊಕೊ ವಂಡೇವೇಘ್ ಅವರು ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಅನುಭವಿಸಿದ್ದಾರೆ.

ಸಾನಿಯಾ ಜೋಡಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ರೊಲುಕಾ ಒಲರು ಮತ್ತು ನಾದಿಯಾ ಕಿಚೆನೋಕ್ ವಿರುದ್ಧ 6-4, 4-6, 3-6 ಸೆಟ್‌ಗಳ ಆಘಾತಕಾರಿ ಸೋಲು ಕಂಡಿತು.

ತಮ್ಮ ಫೇವರಿಟ್ ಫ್ಲಷಿಂಗ್ ಮೆಡೋಸ್‌ನ ಹಾರ್ಡ್‌ಕೋರ್ಟ್‌ನಲ್ಲಿ ಅಮೆರಿಕನ್ ಜತೆಗಾರ್ತಿ ಕೊಕೊ ವಂಡೇವೇಘ್ ಜತೆ ಈ ಬಾರಿ ಸಾನಿಯಾ ಕಣಕ್ಕೆ ಇಳಿದಿದ್ದರು. 12ನೇ ಶ್ರೇಯಾಂಕದ ರೊಮಾನಿಯಾ- ಉಕ್ರೇನ್ ಜೋಡಿ ವಿರುದ್ಧ ಮೊದಲ ಸೆಟ್‌ನಲ್ಲಿ ಜಯ ಸಾಧಿಸಿದರೂ, ಮುಂದಿನ ಎರಡು ಸೆಟ್ ಸೋಲುವ ಮೂಲಕ ಮೊದಲ ಸುತ್ತಿನಲ್ಲೇ ನಿರ್ಗಮಿಸಬೇಕಾಯಿತು.

ಸಾನಿಯಾ ಮಿರ್ಜಾ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ 2014ರಲ್ಲಿ ಬರ್ನೊ ಸೊರೇಸ್ ಜತೆ ಸೇರಿ ಪ್ರಶಸ್ತಿ ಗೆದ್ದಿದ್ದರು. ಮರು ವರ್ಷ ಮಹಿಳಾ ಡಬಲ್ಸ್‌ನಲ್ಲಿ ಮಾರ್ಟಿನಾ ಹಿಂಗಿಸ್ ಜತೆ ಸೇರಿ ಮಹಿಳಾ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಸಾನಿಯಾ, ಮಹಿಳಾ ಡಬಲ್ಸ್‌ನಲ್ಲಿ 91 ವಾರಗಳ ಕಾಲ ಅಗ್ರ ರ್ಯಾಂಕಿಂಗ್ ಕಾಯ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News