ಭಾರತ ಕ್ರಿಕೆಟ್ ತಂಡಕ್ಕೆ ಕೋವಿಡ್ ಭೀತಿ: ರವಿ ಶಾಸ್ತ್ರಿಗೆ ಕೊರೋನ ದೃಢ

Update: 2021-09-05 10:24 GMT

ಲಂಡನ್: ಕೊರೋನ-19  ಪರೀಕ್ಷೆಯಲ್ಲಿ  ರವಿ ಶಾಸ್ತ್ರಿ  ಪಾಸಿಟಿವ್  ವರದಿ ಸ್ವೀಕರಿಸಿದ ನಂತರ ಮುಖ್ಯ ಕೋಚ್ ರವಿಶಾಸ್ತ್ರಿ ಸೇರಿದಂತೆ ನಾಲ್ವರು ಭಾರತೀಯ ಸಹಾಯಕ ಸಿಬ್ಬಂದಿಯನ್ನು ಪ್ರತ್ಯೇಕಿಸಲಾಗಿದೆ ಎಂದು  ಬಿಸಿಸಿಐ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಶಾಸ್ತ್ರಿ ಅವರೊಂದಿಗೆ  ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ . ಶ್ರೀಧರ್ ಹಾಗೂ  ಫಿಸಿಯೋ ನಿತಿನ್ ಪಟೇಲ್ ಅವರನ್ನು ಪ್ರತ್ಯೇಕಿಸಲಾಗಿದೆ ಎಂದು ಬಿಸಿಸಿಐ ದೃ ಢಪಡಿಸಿದೆ,

"ಬಿಸಿಸಿಐ ವೈದ್ಯಕೀಯ ತಂಡವು ಮುಖ್ಯ ತರಬೇತುದಾರ ರವಿ ಶಾಸ್ತ್ರಿ ಬೌಲಿಂಗ್ ಕೋಚ್ ಬಿ.ಅರುಣ್, ಫೀಲ್ಡಿಂಗ್ ಕೋಚ್ ಶ್ರೀಧರ್ ಹಾಗೂ ಫಿಸಿಯೊ ನಿತಿನ್ ಪಟೇಲ್ ಅವರನ್ನು  ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕವಾಗಿಡಲಾಗಿದೆ.  ಎಲ್ಲರೂ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದಾರೆ ಮತ್ತು ತಂಡದ ಹೋಟೆಲ್‌ನಲ್ಲಿಯೇ ಇರುತ್ತಾರೆ ಹಾಗೂ  ವೈದ್ಯಕೀಯ ತಂಡದಿಂದ ದೃಢೀಕರಿಸುವವರೆಗೂ ಟೀಮ್ ಇಂಡಿಯಾದೊಂದಿಗೆ ಪ್ರಯಾಣಿಸಬಾರದು "ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News