ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಅವರ ಮುಂಬೈ ನಿವಾಸದ ಹೊರಗೆ ಭದ್ರತೆ ಹೆಚ್ಚಳ

Update: 2021-09-06 10:00 GMT

ಮುಂಬೈ:  ಆರೆಸ್ಸೆಸ್ ಅನ್ನು ತಾಲಿಬಾನ್ ಜೊತೆ ಹೋಲಿಸಿದ್ದ ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವಂತೆ ಖ್ಯಾತ ಬರಹಗಾರ-ಸಾಹಿತಿ ಜಾವೇದ್ ಅಖ್ತರ್ ಗೆ ಮಹಾರಾಷ್ಟ್ರ ಬಿಜೆಪಿ ಶಾಸಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಜಾವೇದ್ ಅಖ್ತರ್ ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜುಹು ಪ್ರದೇಶದ ಇಸ್ಕಾನ್ ದೇವಾಲಯದ ಬಳಿ ಅಖ್ತರ್ ನಿವಾಸದ ಹೊರಗೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಹಿಳಾ ಕಾನ್ಸ್‌ಟೇಬಲ್‌ಗಳು ಸೇರಿದಂತೆ ಭದ್ರತಾ ಸಿಬ್ಬಂದಿಯನ್ನು ಸಾಹಿತಿಗಳ ಮನೆಯ ಹೊರಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಲಿಬಾನಿಗಳು ಇಸ್ಲಾಮಿಕ್ ದೇಶವನ್ನು ಬಯಸುತ್ತಾರೆ. ಈ ಜನರು ಹಿಂದೂ ರಾಷ್ಟ್ರವನ್ನು ಮಾಡಲು ಬಯಸುತ್ತಾರೆ”ಎಂದು ಇತ್ತೀಚೆಗೆ ಸುದ್ದಿವಾಹಿನಿಗೆ ಸಾಹಿತಿ ಅಖ್ತರ್ ಅವರು  ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರೆಸ್ಸೆಸ್) ಹೆಸರಿಸದೆ ಹೇಳಿದ್ದರು.

ಬಿಜೆಪಿ ಶಾಸಕ ಹಾಗೂ  ರಾಜ್ಯ ಪಕ್ಷದ ವಕ್ತಾರ ರಾಮ್ ಕದಮ್ ಅವರು ಅಖ್ತರ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಅಖ್ತರ್  ತಮ್ಮ ಹೇಳಿಕೆಗೆ ಸಂಘದ ಪದಾಧಿಕಾರಿಗಳ ಕ್ಷಮೆ ಕೇಳುವವರೆಗೆ ಅಖ್ತರ್ ಒಳಗೊಂಡ ಯಾವುದೇ ಚಿತ್ರವನ್ನು ದೇಶದಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ ಎಂದು ಮುಂಬೈ ಶಾಸಕ ಕದಂ ಹೇಳಿದ್ದರು.

ಅಖ್ತರ್ ಅವರು  ಆರೆಸ್ಸೆಸ್ ಅನ್ನು ತಾಲಿಬಾನ್‌ನೊಂದಿಗೆ ಹೋಲಿಸಿರುವುದು ಸಂಪೂರ್ಣ ತಪ್ಪು ಎಂದು ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಹಾಗೂ  ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೊಂಡಿರುವ ಶಿವಸೇನೆ ಸೋಮವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News