ತನಿಯ ಪರವ

Update: 2021-09-06 17:37 GMT

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ನೇಮೋತ್ಸವದಲ್ಲಿ ದೈವ ನರ್ತನ ಸೇವೆ ನೀಡುತ್ತಿದ್ದ ತನಿಯ ಪರವ (64)  ಹೃದಯಾಘಾತಕ್ಕಿಡಾಗಿ ರವಿವಾರ ನಿಧನರಾದರು.

ವಂಶಪಾರಂಪರ್ಯವಾಗಿ  ನಡೆಸಿಕೊಂಡು  ಬರಲಾಗುತ್ತಿದ್ದ  ಈ ಸೇವೆಯನ್ನು ಕಳೆದ ಹಲವು ದಶಕಗಳಿಂದ ಶ್ರದ್ಧೆ ಹಾಗೂ ಭಕ್ತಿಯೊಂದಿಗೆ ನಿರ್ವಹಿಸಿಕೊಂಡು ಬರುತ್ತಿದ್ದ ಇವರು ಮೃಧು ಹಾಗೂ ಮಿತಭಾಷಿಯಾಗಿದ್ದು, ಜನಾನುರಾಗಿಯಾಗಿದ್ದರು. 

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ