ದಿಲ್ಲಿ ನಗರಪಾಲಿಕೆ ಚುನಾವಣೆ: ಪ್ರತಿ ತಿಂಗಳು ಉಚಿತ ತೀರ್ಥಯಾತ್ರೆ ಏರ್ಪಡಿಸುವುದಾಗಿ ಬಿಜೆಪಿ ಭರವಸೆ

Update: 2021-09-07 07:56 GMT
photo: twitter

ಹೊಸದಿಲ್ಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಎಂಸಿಡಿ ಚುನಾವಣೆಗೆ ಮುನ್ನ ದಿಲ್ಲಿ ಬಿಜೆಪಿ ನಗರದ ಜನರನ್ನು ಹಿಂದೂ ಯಾತ್ರಾ ಸ್ಥಳಗಳಿಗೆ ಉಚಿತವಾಗಿ ಕಳುಹಿಸುವ ಭರವಸೆ ನೀಡಿದೆ.

ಪ್ರತಿ ಮಂಡಲದಲ್ಲಿ (ವಾರ್ಡ್) ಪಕ್ಷದ ಕಾರ್ಯಕರ್ತರು ಉಚಿತ ತೀರ್ಥಯಾತ್ರೆಗಳನ್ನು ಏರ್ಪಡಿಸುತ್ತಾರೆ ಎಂದು ದಿಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಿದ್ಧಾರ್ಥ ರವಿವಾರ ಹೇಳಿದ್ದರು.

ಈ ಘೋಷಣೆ ಮಾಡುವಾಗ ಮಂಡಾವಳಿ ವಾರ್ಡ್ ಅಧ್ಯಕ್ಷ ಕೈಲಾಶ್ ಯಾದವ್ ಏರ್ಪಡಿಸಿದ್ದ ಯಾತ್ರಾರ್ಥಿಗಳ ಬಸ್ಸಿಗೆ ಅವರು ಹಸಿರು ನಿಶಾನೆ ತೋರಿದರು.

"ಹಿಂದೂ ಯಾತ್ರಾ ಸ್ಥಳಗಳ ದರ್ಶನಕ್ಕಾಗಿ ರಾಜ್ಯದ (ದಿಲ್ಲಿ) ಜನರನ್ನು ಕಳುಹಿಸಲು ಬಿಜೆಪಿ ಬದ್ಧವಾಗಿದೆ" ಎಂದು ಸಿದ್ಧಾರ್ಥ ಹೇಳಿದರು. ಎಎಪಿ ಸರಕಾರದ ಇದೇ ರೀತಿಯ ಉಪಕ್ರಮವು ಮಾರ್ಚ್‌ನಲ್ಲಿ ಆರಂಭವಾಗಿತ್ತು.

ಎಂಸಿಡಿಯಲ್ಲಿರುವ ಬಿಜೆಪಿ ಕೌನ್ಸಿಲರ್‌ಗಳಿಗೆ ಪಕ್ಷದಿಂದ ಉಚಿತ ಯಾತ್ರೆಗಳನ್ನು ಆಯೋಜಿಸುವಂತೆ ಸೂಚನೆ ನೀಡಲಾಗಿದೆ ಎಂದು ದಿಲ್ಲಿಯ ಹಿರಿಯ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದಿಲ್ಲಿಯ ಹಿರಿಯ ನಾಗರಿಕರಿಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಉಚಿತ ಯಾತ್ರೆಯನ್ನು ಒದಗಿಸುವುದಾಗಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News