ತಮಿಳುನಾಡು ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಮಂಡನೆ

Update: 2021-09-08 16:39 GMT

ಚೆನ್ನೈ,ಸೆ.8: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಸಿಎಎ ವಿರೋಧಿ ನಿರ್ಣಯವನ್ನು ಮಂಡಿಸಿದರು. ಈ ಕಾನೂನನ್ನು ಹಿಂದೆಗೆದುಕೊಳ್ಳುವಂತೆ ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

  ‌
‘2019ನೇ ಸಾಲಿನಲ್ಲಿ ಸಂಸತ್ತು ಅಂಗೀಕರಿಸಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯು ನಮ್ಮ ಸಂವಿಧಾನದಲ್ಲಿ ಹೇಳಲಾಗಿರುವ ಜಾತ್ಯತೀತ ತತ್ತ್ವಗಳಿಗೆ ಅನುಗುಣವಾಗಿಲ್ಲ ಮತ್ತು ದೇಶದಲ್ಲಿರುವ ಕೋಮು ಸೌಹಾರ್ದಕ್ಕೆ ಪೂರಕವಾಗಿಲ್ಲ ಎಂದು ಈ ಸದನವು ಪರಿಗಣಿಸಿದೆ. ಆದ್ದರಿಂದ ದೇಶದ ಏಕತೆ ಮತ್ತು ಕೋಮು ಸೌಹಾರ್ದವನ್ನು ರಕ್ಷಿಸಲು ಮತ್ತು ಖಚಿತಪಡಿಸಲು ಹಾಗೂ ಭಾರತೀಯ ಸಂವಿಧಾನದಲ್ಲಿ ಹೇಳಲಾಗಿರುವ ತತ್ತ್ವಗಳನ್ನು ಎತ್ತಿಹಿಡಿಯಲು ಈ ಕಾಯ್ದೆಯನ್ನು ಹಿಂದೆಗೆದುಕೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಲು ಈ ಸದನವು ನಿರ್ಣಯಿಸಿದೆ ’ ಎಂದು ಸ್ಟಾಲಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News