ತಾಲಿಬಾನ್ ಸರಕಾರ ಎಲ್ಲರನ್ನೂ ಒಳಗೊಂಡಿಲ್ಲ: ವಿಶ್ವಸಂಸ್ಥೆಗೆ ಅಫ್ಘಾನ್ ರಾಯಭಾರಿ ಇಸಕ್ಝಾಯಿ ಪ್ರತಿಕ್ರಿಯೆ

Update: 2021-09-08 16:55 GMT

ನ್ಯೂಯಾರ್ಕ್, ಸೆ.8: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಘೋಷಿಸಿದ ಸರಕಾರ ಎಲ್ಲರನ್ನೂ ಒಳಗೊಂಡ ಸರಕಾರವಾಗಿಲ್ಲ ಮತ್ತು ಅಲ್ಪಸಂಖ್ಯಾತರು ಹಾಗೂ ಮಹಿಳೆಯರನ್ನು ಹೊರಗಿಡುವ ಸರಕಾರವನ್ನು ಅಫ್ಘಾನ್ ಜನತೆ ಒಪ್ಪುವುದಿಲ್ಲ . ಅಫ್ಘಾನ್ನಲ್ಲಿ ಇಸ್ಲಾಮಿಕ್ ಎಮಿರೇಟ್ಸ್ ನ ಮರುಸ್ಥಾಪನೆಯನ್ನು ವಿಶ್ವಸಂಸ್ಥೆ ತಿರಸ್ಕರಿಸಬೇಕು ಎಂದು ವಿಶ್ವಸಂಸ್ಥೆಗೆ ಅಫ್ಘಾನ್ ನ ರಾಯಭಾರಿ ಹಾಗೂ ಕಾಯಂ ಪ್ರತಿನಿಧಿ ಗುಲಾಂ ಇಸಕ್ಝಾಯಿ ಹೇಳಿದ್ದಾರೆ.

ನಾನು ಇಲ್ಲಿ ಮಾತನಾಡುತ್ತಿರುವ ಸಂದರ್ಭ ತಾಲಿಬಾನ್ ತನ್ನ ಸರಕಾರವನ್ನು ಘೋಷಿಸಿದೆ. ಇದು ಏನೂ ಆಗಿರಬಹುದು, ಆದರೆ ಸಮಗ್ರ(ಎಲ್ಲರನ್ನೂ ಒಳಗೊಂಡ) ಸರಕಾರವಾಗಿಲ್ಲ ಎಂದು ಇಸಕ್ಝಾಯಿ ಹೇಳಿದರು. ತಾಲಿಬಾನ್ ಸರಕಾರದ ಬಗ್ಗೆ ಈ ಹಿಂದಿನ ಸರಕಾರ ನೇಮಿಸಿದ ಅಧಿಕಾರಿ ನೀಡಿರುವಪ್ರಥಮ ಪ್ರತಿಕ್ರಿಯೆ ಇದಾಗಿದೆ.

 ಅಫ್ಘಾನ್ ನ ಜನತೆ, ವಿಶೇಷವಾಗಿ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಅಫ್ಘಾನಿಯರೆಂದು ಪರಿಚಿತರಾಗಿರುವ ನಮ್ಮ ಯುವಜನತೆ ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಹೊರಗಿಡುವ ಆಡಳಿತ ವ್ಯವಸ್ಥೆಯನ್ನು ಒಪ್ಪುವುದಿಲ್ಲ. ಜನರ ಸಾಂವಿಧಾನಿಕ ಹಕ್ಕನ್ನು ನಿರಾಕರಿಸುವ ಮತ್ತು ಈ ಹಿಂದಿನ ಅಭಿವೃದ್ಧಿ ಕಾರ್ಯವನ್ನು ರಕ್ಷಿಸದ ಆಡಳಿತಕ್ಕೆ ಅಫ್ಘಾನೀಯರ ಸಮ್ಮತಿಯಿಲ್ಲ ಎಂದವರು ಹೇಳಿದ್ದಾರೆ. 

‘ಕೋವಿಡ್ ನಂತರದ ಚೇತರಿಕೆಯಲ್ಲಿ ಪುನಶ್ಚೇತನ ಮತ್ತು ಅಂತರ್ವೇಶನ (ಒಳಗೂಡಿಸುವಿಕೆ): ಶಾಂತಿ ಸಂಸ್ಕತಿಯ ಪರಿವರ್ತಕ ಪಾತ್ರ’ ಎಂಬ ವಿಷಯದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಅಫ್ಘಾನ್ನಲ್ಲಿ ಶಾಂತಿಯ ಸಂಸ್ಕತಿಯನ್ನು ಉತ್ತೇಜಿಸಲು ಎಲ್ಲಾ ಸದಸ್ಯ ರಾಷ್ಟ್ರಗಳೂ ನೆರವಾಗಬೇಕು ಎಂದರು. ಇಸ್ಲಾಮಿಕ್ ಎಮಿರೇಟ್ಸ್ ನ ಮರುಸ್ಥಾಪನೆಯನ್ನು ತಿರಸ್ಕರಿಸುವ, ಮಾನವಹಕ್ಕು ಮತ್ತು ಮಾನವೀಯತೆಯ ಕಾನೂನನ್ನು ಉಲ್ಲಂಸುವ ಕಾರ್ಯಕ್ಕೆ ತಾಲಿಬಾನ್ ಅನ್ನು ಹೊಣೆಯಾಗಿಸುವ ಮತ್ತು ಮಹಿಳೆಯರು ಮತ್ತು ಹುಡುಗಿಯರ ಹಕ್ಕನ್ನು ಗೌರವಿಸುವ ಸಮಗ್ರ ಸರಕಾರ ರಚನೆಗೆ ಒತ್ತಡ ಹೇರುವ ಕಾರ್ಯ ಮುಂದುವರಿುಬೇಕು ಎಂದವರು ಒತ್ತಾಯಿಸಿದ್ದಾರೆ.

ಅಫ್ಘಾನ್ ನ ಮಾಜಿ ಅಧ್ಯಕ್ಷ ಅಶ್ರಫ್ ಘನಿ 2021ರ ಜೂನ್ ನಲ್ಲಿ ಇಸಕ್ಝಾಯಿಯನ್ನು ವಿಶ್ವಸಂಸ್ಥೆಗೆ ಅಫ್ಘಾನ್ ರಾಯಭಾರಿಯನ್ನಾಗಿ ನೇಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News