ಬೆಂಗಳೂರು: ಪಾಕಿಸ್ತಾನ ವಿರುದ್ಧ ಅಫ್ಘಾನ್ ವಿದ್ಯಾರ್ಥಿಗಳ ಪ್ರತಿಭಟನೆ

Update: 2021-09-08 17:23 GMT

ಬೆಂಗಳೂರು, ಸೆ.8:ಅಫ್ಘಾನಿಸ್ತಾನದ ನೂತನ ಸರಕಾರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ವಿರೋಧಿಸಿ ಅಫ್ಘಾನ್ ದೇಶದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಬುಧವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಅಫ್ಘಾನ್ ದೇಶದ ವಿದ್ಯಾರ್ಥಿಗಳು, ತಾಲಿಬಾನ್ ಸರಕಾರದಲ್ಲಿ ನೆರೆಯ ಪಾಕಿಸ್ತಾನ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಈ ಕೂಡಲೇ ಪಾಕಿಸ್ತಾನ ತನ್ನ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಅಫ್ಘಾನಿಸ್ತಾನ ಸ್ವಾತಂತ್ರ್ಯವಾಗಿರಲು ಬಯಸಿದೆ.ಆದರೆ, ಪಾಕಿಸ್ತಾನ ತನ್ನ ಆಡಳಿತ ನಡೆಸಲು ಸಂಚು ರೂಪಿಸಿದ್ದು, ಈಗಾಗಲೇ ಸೇನಾ ವಿಚಾರದಲ್ಲೂ ಹಸ್ತಕ್ಷೇಪ ಮಾಡಿದೆ.ಜತೆಗೆ, ಕೆಲ ತಾಲಿಬಾನ್ ನಾಯಕರೊಂದಿಗೆ ಸಂಬಂಧ ಹೊಂದಿರುವುದು ಸರಿಯಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಟೀಕಿಸಿದರು.

ಭಾರತ ಸೇರಿದಂತೆ ಯಾವುದೇ ದೇಶವೂ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡುವ ಅಗತ್ಯವಿಲ್ಲ. ತಾಲಿಬಾನ್ ಸಂಘಟನೆಯೂ ಆತಂಕರಿಕ ಭಯೋತ್ಪಾದನೆ ಚಟುವಟಿಕೆಗಳಿಗೆ ನೆರವು ನೀಡಲು ಮುಂದಾಗಿದೆ.ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು.ಜೊತೆಗೆ, ಯಾವುದೇ ದೇಶವೂ ಇದಕ್ಕೆ ಮಾನ್ಯತೆ ನೀಡದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News