×
Ad

‘ಸಿಇಟಿ-2021 ಸಿಬಿಎಸ್‍ ಇ, ಸಿಐಎಸ್‍ಸಿಇ ಅಂಕಗಳ ದಾಖಲು’

Update: 2021-09-09 21:59 IST

ಬೆಂಗಳೂರು, ಸೆ.9: ಕರ್ನಾಟಕ ದ್ವಿತೀಯ ಪಿಯುಸಿ 2021ರ ಅಂಕಗಳನ್ನು ಪ್ರಾಧಿಕಾರವು ನೇರವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನೇರವಾಗಿ ಪಡೆದುಕೊಳ್ಳುತ್ತದೆ. ಆದರೆ, 12ನೆ ತರಗತಿಯನ್ನು ಸಿಬಿಎಸ್‍ಇ(ಜಮ್ಮು ಮತ್ತು ಕಾಶ್ಮೀರ ಸೇರಿ), ಸಿಐಎಸ್‍ಸಿಇ, 10+2 ಮತ್ತಿತರ ಬೋರ್ಡುಗಳಲ್ಲಿ 2021ರಲ್ಲಿ ಪೂರೈಸಿದವರು ಮತ್ತು 12ನೆ ತರಗತಿಯನ್ನು 2021ಕ್ಕಿಂತ ಮೊದಲೆ ಉತ್ತೀರ್ಣರಾಗಿರುವ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ 12ನೆ ತರಗತಿಯ ಅಂಕಗಳ ವಿವರಗಳನ್ನು ಪ್ರಾಧಿಕಾರದ ವೆಬ್‍ಸೈಟ್ ನಲ್ಲಿ ನಿಗದಿತ ಲಿಂಕ್‍ನಲ್ಲಿ ಸೆ.14ರೊಳಗಾಗಿ ದಾಖಲಿಸಲು ಸೂಚಿಸಿದೆ.

ಅದೇ ರೀತಿ ಕರ್ನಾಟಕ ದ್ವಿತೀಯ ಪಿಯುಸಿ ಸಪ್ಲಿಮೆಂಟರಿ ವಿದ್ಯಾರ್ಥಿಗಳೂ ಸಹ ಅಂಕಗಳನ್ನು ದಾಖಲಿಸಲು ಸೂಚಿಸಿದೆ. ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2021ರ ನಾಟಾ ಪರೀಕ್ಷೆಯ ಅಂಕಗಳನ್ನು ಅರ್ಹತೆಯ ಅನುಗುಣವಾಗಿ ದಾಖಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‍ಸೈಟ್ http://kea.kar.nic.in ಗೆ ಭೇಟಿ ನೀಡಲು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News