'ಕಾವೇರಿ' ಮೂರನೇ ಹಂತದಿಂದ ಸರಬರಾಜಾಗುವ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ

Update: 2021-09-10 14:54 GMT

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ತೊರೆಕಾಡನಹಳ್ಳಿಯ 3ನೆ ಹಂತದ ಪಂಪಿಂಗ್ ಸ್ಟೇಷನ್‍ನಲ್ಲಿ 1750 ಮಿ.ಮೀ ವ್ಯಾಸದ ಟ್ರಾನ್ಸ್‍ಮಿಷನ್ ಮುಖ್ಯ ಮಾರ್ಗದಲ್ಲಿ ಸೋರಿಕೆ ಕಂಡುಬಂದಿದ್ದು, ಸೋರಿಕೆ ತಡೆಗಟ್ಟುವ ತುರ್ತು ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಸೆ.12ರಿಂದ ಸೆ.13ರ ವರೆಗೆ ಕಾವೇರಿ ಮೂರನೇ ಹಂತದ ನೀರು ಸರಬರಾಜನ್ನು ಸ್ಥಗಿತಗೊಳಿಸುತ್ತಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಗಾಂಧಿನಗರ, ಕುಮಾರ ಪಾರ್ಕ್ ಪೂರ್ವ, ವಸಂತ ನಗರ, ಹೈಗ್ರೌಂಡ್ಸ್, ಸಂಪಂಗಿರಾಮನಗರ, ಸಿ.ಕೆ.ಸಿ.ಗಾರ್ಡನ್, ಕೆ.ಎಸ್.ಗಾರ್ಡನ್, ಟೌನ್‍ಹಾಲ್, ಲಾಲ್‍ಬಾಗ್ ರೋಡ್ 1 ರಿಂದ 4ನೆ ಕ್ರಾಸ್, ಧರ್ಮರಾಯಸ್ವಾಮಿ ಟೆಂಪಲ್ ವಾರ್ಡ್ ಸುತ್ತಮುತ್ತಲಿನ ಪ್ರದೇಶಗಳು, ಕಬ್ಬನ್‍ಪೇಟೆ ಮೇನ್ ರೋಡ್, ಕುಂಬಾರ್ ಪೇಟೆ, ಕಾಟನ್ ಪೇಟೆ, ಚಿಕ್ಕಪೇಟೆ, ನಗರತ್ ಪೇಟೆ, ಬಕ್ಷಿ ಗಾರ್ಡನ್, ಭಾರತಿನಗರ, ಸೇಂಟ್ ಜಾನ್ಸ್ ರಸ್ತೆ, ಹೈನ್ಸ್ ರಸ್ತೆ, ನಾರಯಣ ಪಿಳ್ಳೈ ರಸ್ತೆ, ಸಂಗಮ್ ರಸ್ತೆ, ಕಾಮರಾಜ್ ರಸ್ತೆ, ವೀರಪಿಳ್ಳೈ ರೋಡ್, ಇನ್‍ಪ್ಯಾಂಟರಿ ರೋಡ್, ವಸಂತ ನಗರ, ಶಿವಾಜಿನಗರ, ಲಾವೆಲ್ಲ ರೋಡ್. ಫ್ರೇಜರ್ ಟೌನ್ ಸೇವಾಠಾಣೆಯಡಿಯ ಪ್ರದೇಶಗಳು.

ಬ್ಯಾಡರಹಳ್ಳಿ, ವಿಲಿಯಮ್ಸ್ ಟೌನ್, ಸಿಂಡಿ ಕಾಲೋನಿ, ಎನ್‍ಸಿ ಕಾಲನಿ, ಕೋಲ್ಸ್ ರಸ್ತೆ, ಮಚಲಿಬೆಟ್ಟ ಸೇವಾಠಾಣೆಯಡಿಯ ಪ್ರದೇಶಗಳು, ಕಾಕ್ಸ್‍ಟೌನ್, ದೊಡ್ಡಿಗುಂಟ, ಜೀವನಹಳ್ಳಿ, ವಿವೇಕಾನಂದ ನಗರ, ಹಚಿನ್ಸ್ ರಸ್ತೆ, ದೇವಿಸ್ ರಸ್ತೆ, ಕುಕ್ಸ್‍ಟೌನ್, ಹಳೆ ಬೈಯಪ್ಪನಹಳ್ಳಿ, ನಾಗಯ್ಯನಪಾಳ್ಯ, ಸತ್ಯ ನಗರ, ಮಾರುತಿಸೇವಾ ನಗರ, ಪಿಳ್ಳಣ್ಣ ಗಾರ್ಡನ್-1 ಸೇವಾಠಾಣೆಯಡಿಯ ಪ್ರದೇಶಗಳು.

ಮುಸ್ಲಿಂ ಕಾಲೋನಿ, ಕುಶಲ್ ನಗರ, ಪಿ&ಟಿ ಕಾಲೋನಿ, ಡಿ.ಜೆ.ಹಳ್ಳಿ, ಪಿಳ್ಳಣ್ಣ ಗಾರ್ಡನ್-2 ಸೇವಾಠಾಣೆಯಡಿಯ ಪ್ರದೇಶಗಳು: ಕೆಜಿ ಹಳ್ಳಿ, ನಾಗವಾರ, ಸಮಾಧಾನ ನಗರ, ಪಿಳ್ಳಣ್ಣ ಗಾರ್ಡನ್ 1, 2 3ನೆ ಹಂತ, ಹೊಸ ಬಾಗಲೂರು, ಹಳೆ ಬಾಗಲೂರು, ಲಿಂಗರಾಜಪುರ ಚಾಮರಾಜ ಪೇಟೆ, ಬ್ಯಾಂಕ್ ಕಾಲೋನಿ, ಶ್ರೀನಿವಾಸ ನಗರ, ಗವಿಪುರಂ, ಹನುಮಂತ ನಗರ, ಗಿರಿ ನಗರ, ಬ್ಯಾಟಾರಾಯನಪುರ, ರಾಘವೇಂದ್ರ ಬ್ಲಾಕ್, ಅವಲಹಳ್ಳಿ, ಮುನೇಶ್ವರ ಬ್ಲಾಕ್, ಕಾಳಿದಾಸ್ ಲೇಔಟ್, ಶ್ರೀನಗರ ಬಿ.ಎಸ್.ಕೆ. 1ನೇ ಸ್ಟೇಜ್, ಯಶವಂತಪುರ(ಪಾರ್ಟ್), ಮಲ್ಲೇಶ್ವರಂ, ಕುಮಾರಪಾರ್ಕ್, ಜಯಮಹಲ್, ಶೇಷಾದ್ರಿಪುರಂ, ನಂದಿದುರ್ಗರಸ್ತೆ ಎಕ್ಸ್‍ಟೆನ್‍ಷನ್, ಜೆ.ಸಿ.ನಗರ.

ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಬಿ.ಇ.ಎಲ್ ರೋಡ್(ಪಾರ್ಟ್), ಸಂಜಯ್ ನಗರ, ಡಾಲರ್ಸ್ ಕಾಲನಿ, ಆರ್.ಎಂ.ವಿ ಎಕ್ಸ್‍ಟೆನ್‍ಷನ್ ಗೆದ್ದಲಹಳ್ಳಿ, ಭೂಪಸಂದ್ರ, ಕಾವಲ್‍ಬೈರಸಂದ್ರ, ಗಂಗಾ ನಗರ, ಆರ್.ಟಿ.ನಗರ, ಮನೋರಾಯನಪಾಳ್ಯ, ಅನಂದನಗರ, ವಿ.ನಾಗೇನಹಳ್ಳಿ, ಶಾಂಪುರ, ಸುಲ್ತಾನ್ ಪಾಳ್ಯ. ಶಾಂತಾಲ ನಗರ, ಅಶೋಕ್ ನಗರ, ಎಂ ಜಿ. ರೋಡ್, ಬ್ರಿಗೇಡ್ ರೋಡ್. ಎಚ್‍ಎಎಲ್ 2ನೆ ಹಂತದ ಭಾಗ, ದೂಪನಹಳ್ಳಿ, ಇಂದಿರಾನಗರ 2ನೆ ಹಂತ, ಲಕ್ಷ್ಮಿಪುರಂ, ಕದಿರಯ್ಯನ ಪಾಳ್ಯ, ಕಲಹಳ್ಳಿ, ಆಂಧ್ರ ಕಾಲನಿ, ಎಚ್‍ಎಎಲ್ 3ನೆ ಹಂತ, ಜೀವನ್ ಭೀಮ ನಗರ, ಕೋಡಿಹಳ್ಳಿ. ಎಂ.ಜಿ.ರೋಡ್, ಹನುಮಂತಪ್ಪ ಲೇಔಟ್, ಬಜಾರ್ ಸ್ಟ್ರೀಟ್, ಹಲ್ಸೂರ್, ಎಂವಿ ಗಾರ್ಡನ್, ಮರ್ಫಿಟೌನ್, ಜೋಗುಪಾಳ್ಯ, ಕೇಂಬ್ರಿಡ್ಜ್ ಲೇಔಟ್, ಧೀನಬಂಧುನಗರ, ಲಿಂಗರಾಜುಪುರಂ, ಜಾನಕಿರಾಮ್ ಲೇಔಟ್, ಸಿದ್ದರಾಮಪ್ಪ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News