ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಹಚ್ಚಿದ ಸಿಸಿಬಿ: 2 ಕೋ.ರೂ. ಮೌಲ್ಯದ ಡ್ರಗ್ಸ್ ಜಪ್ತಿ, ಓರ್ವನ ಬಂಧನ

Update: 2021-09-16 06:48 GMT

ಬೆಂಗಳೂರು, ಸೆ.16: ಮನೆಯಲ್ಲೇ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಯಲ್ಲಿ ಬಯಲಿಗೆಳೆದಿರುವ ಸಿಸಿಬಿ ಸಿಸಿಬಿಯ ಆಂಟಿ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳ ತಂಡ ಸುಮಾರು 2 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ. ಓರ್ವ ವಿದೇಶಿ ಮೂಲದ ಆರೋಪಿಯನ್ನು ಬಂಧಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ್, ‘ಪ್ರಕರಣದ ಪ್ರಮುಖ ಆರೋಪಿಯಾಗಿರುವ ನೈಜೀರಿಯಾ ಪ್ರಜೆ ಜಾನ್ ಎಂಬಾತನನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ’ಎಂದು ತಿಳಿಸಿದ್ದಾರೆ.

 ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ‌ ಬೆಟ್ಟದಾಸಪುರದಲ್ಲಿನ ಮನೆಯೊಂದರಲ್ಲಿ ಆರೋಪಿ ಬಾಡಿಗೆಗೆ ಇದ್ದ.‌ ನಗರದ ಮಾರುಕಟ್ಟೆ ಹಾಗೂ ಆನ್‌ಲೈನ್ ಮೂಲಕ ರಾಸಾಯನಿಕಗಳನ್ನು ಖರೀದಿಸುತ್ತಿದ್ದ. ಅದನ್ನೇ ಬಳಸಿಕೊಂಡು ಎಂಡಿಎಂಎ ಮಾತ್ರೆಗಳನ್ನು ತಯಾರಿಸುತ್ತಿದ್ದ. ಇವುಗಳನ್ನು ನಗರದಲ್ಲಿ ಹಾಗೂ ವಿದೇಶಗಳಿಗೆ ಹೊಸ ಶೂಗಳ ಒಳಗೆ ಬಚ್ಚಿಟ್ಟು ಕಳುಹಿಸುತ್ತಿದ್ದ' ಎಂದರು.

ಡ್ರಗ್ಸ್ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News