ಆಲ್ಪ್ರೆಡ್ ಡಿ’ಸೋಜ

Update: 2021-09-16 13:54 GMT

ಉಡುಪಿ, ಸೆ.16: ವಿಮಾ ನೌಕರರ ಸಂಘ ಉಡುಪಿ ಮತ್ತು ವಿಮಾ ಪಿಂಚಣಿದಾರರ ಸಂಘ ಉಡುಪಿ ಇವುಗಳ ಹಿರಿಯ ಸದಸ್ಯರಾಗಿದ್ದ ಆಲ್ಫ್ರೆಡ್ ಡಿ’ಸೋಜ ಇವರು ಸೆ.15ರಂದು ತಮ್ಮ 85ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

ಆಲ್ಫ್ರೆಡ್ ಡಿ’ಸೋಜ ಇವರು ಜೀವನದಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ರೂಢಿಸಿಕೊಂಡಿದ್ದು ಮರಣದ ನಂತರ ತನ್ನ ದೇಹವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ನೀಡಲು ಒಪ್ಪಿಗೆ ಪತ್ರ ನೀಡಿದ್ದು, ಅದರಂತೆ ಅವರ ಮೃತ ದೇಹವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಅವರ ಕುಟುಂಬಿಕರು ಹಸ್ತಾಂತರಿಸಿದರು.

ಉತ್ತಮ ಕ್ರೀಡಾಪಟುವಾಗಿದ್ದ ಡಿಸೋಜ ಅವರು ಚೆಸ್ ಕ್ರೀಡೆಯ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ