ಜಾಗತಿಕ ಭಾಷೆ ಕಲಿಕೆಗೆ ಅರ್ಜಿ ಆಹ್ವಾನ

Update: 2021-09-17 17:30 GMT

ಬೆಂಗಳೂರು, ಸೆ.17: ಬೆಂಗಳೂರು ನಗರ ವಿವಿಯ ಜಾಗತಿಕ ಭಾಷೆಗಳ ಕೇಂದ್ರವು 2021-22ನೇ ಶೈಕ್ಷಣಿಕ ವರ್ಷದಲ್ಲಿ ವಿವಿಧ ಕೋರ್ಸ್‍ಗಳ ಪ್ರವೇಶಾತಿ ನೋಂದಣಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. 

ನೋಂದಣಿಗೆ ಇದೇ ಸೆ.25 ಕೊನೆಯ ದಿನವಾಗಿದ್ದು, ದಂಡ ಸಹಿತ ಸೆ.28 ಕೊನೆಯ ದಿನಾಂಕವಾಗಿರುತ್ತದೆ. ಕೋರ್ಸ್‍ಗಳಿಗೆ ನೋಂದಾಯಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ವಿವಿಯ ಅಧಿಕೃತ ವೆಬ್‍ಸೈಟ್ www.bcu.ac. in ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. 

ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಇಟಾಲಿಯನ್, ಜಪಾನೀಸ್, ಕೊರಿಯನ್, ಚೀನೀ ಭಾಷೆಗಳ ಸರ್ಟಿಫಿಕೇಟ್, ಡಿಪ್ಲೋಮೋ, ಹೈಯರ್ ಡಿಪ್ಲೋಮೋ, ಅಡ್ವಾನ್ಸ್ ಡಿಪ್ಲೋಮೋ ಕೋರ್ಸ್‍ಗಳು ಲಭ್ಯವಿದ್ದು, ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳು ಕನಿಷ್ಠ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22961280/9353251761ಗೆ ಅಥವಾ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಖುದ್ದಾಗಿ ಭೇಟಿ ನೀಡಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News