ಡೀಸೆಲ್-ಪೆಟ್ರೋಲ್ ಜಿಎಸ್ಟಿಗೆ ತರುವಲ್ಲಿ ವಿಳಂಬ ಕೈಗಾರಿಕೆಗಳಿಗೆ ಹಾನಿ: ಕಾಸಿಯಾ

Update: 2021-09-18 17:43 GMT

ಬೆಂಗಳೂರು, ಸೆ.18: ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರುವಲ್ಲಿನ ವಿಳಂಬವು ಕೈಗಾರಿಕೆಗಳಿಗೆ ಭಾರೀ ಹೊರೆಯಾಗಿ ಪರಿಣಮಿಸುತ್ತಿದೆ ಎಂದು 45ನೇ ಜಿಎಸ್ಟಿ ಕೌನ್ಸಿಲ್ ಶಿಫಾರಸ್ಸುಗಳಿಗೆ ಕಾಸಿಯಾ ಪ್ರತಿಕ್ರಿಯಿಸಿದೆ. 

ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಜಿಎಸ್‍ಟಿ ವ್ಯಾಪಿಗೆ ತಂದರೆ, ಅವುಗಳ ಬೆಲೆ ಕಡಿಮೆಯಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಸುಧಾರಿಸಿಕೊಳ್ಳುತ್ತವೆ ಎಂದು ಕಾಸಿಯಾ ತಿಳಿಸಿದೆ.

ರಫ್ತು ಸಾಗಣೆಗೆ ಜಿ.ಎಸ್.ಟಿ. ವಿನಾಯಿತಿಯನ್ನು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಿದ್ದು, ವಿನಾಯಿತಿಯನ್ನು ಮತ್ತಷ್ಟು ತಿಂಗಳುಗಳವರೆಗೆ ವಿಸ್ತರಿಸುವುದು ಸೂಕ್ತ. ಏಕೆಂದರೆ ಜಿಎಸ್ಟಿ ಪೋರ್ಟಲ್‍ನಲ್ಲಿ ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್ ಮರುಪಾವತಿಗೆ ಸಂಬಂಧಿಸಿದ ತಾಂತ್ರಿಕ ದೋಷಗಳನ್ನು ಸರಿಪಡಿಸಬಹುದು ಎಂದು ಕಾಸಿಯಾ ತಿಳಿಸಿದೆ.

ರಾಜ್ಯಗಳು ವಿಧಿಸುವ ರಾಷ್ಟ್ರೀಯ ಪರವಾನಿಗೆ ಶುಲ್ಕದ ಮೇಲೆ ಜಿಎಸ್ಟಿ ವಿನಾಯಿತಿ ನೀಡುವ ಕ್ರಮವನ್ನು ಕಾಸಿಯಾ ಸ್ವಾಗತಿಸಿದ್ದು, ಇದು ಸಂಬಂಧಿತ ಕೈಗಾರಿಕೆಗಳಿಗೆ ಸ್ವಲ್ಪ ಪರಿಹಾರವನ್ನು ಕಲ್ಪಿಸುವುದು ಎಂದು ಕಾಸಿಯಾ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News