ವಾರ್ಷಿಕ ಪ್ರಶಸ್ತಿಗೆ ಅರ್ಹ ಪತ್ರಕರ್ತರಿಂದ ಅರ್ಜಿ ಆಹ್ವಾನ

Update: 2021-09-19 18:47 GMT

ಬೆಂಗಳೂರು, ಸೆ.19: ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡುವ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗಾಗಿ ರಾಜ್ಯದ ಅರ್ಹ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 

ಸಂಘವು ಪ್ರತಿವರ್ಷ ಅತ್ಯುತ್ತಮ ಗ್ರಾಮಾಂತರ ವರದಿಗೆ ಜಿ.ನಾರಾಯಣಸ್ವಾಮಿ ಪ್ರಶಸ್ತಿಯನ್ನು, ಅತ್ಯುತ್ತಮ ಮಾನವೀಯ ವರದಿಗೆ ಪಟೇಲ್ ಬೈರಹನುಮಯ್ಯ ಪ್ರಶಸ್ತಿ, ಅಪರಾಧ ವರದಿಗೆ ಗಿರಿಧರ್ ಪ್ರಶಸ್ತಿ, ಸ್ಕೂಪ್ ವರದಿಗೆ ಜಿ.ಎಸ್. ವೆಂಕಟರಾಮ್ ಪ್ರಶಸ್ತಿ, ಕ್ರೀಡಾ ವರದಿಗೆ ಕೆ.ಎ. ನೆಟ್ಟಕಲಪ್ಪ ಪ್ರಶಸ್ತಿ, ವಿಮರ್ಶಾತ್ಮಕ ಲೇಖನಕ್ಕೆ ಖಾದ್ರಿ ಶಾಮಣ್ಣ ಪ್ರಶಸ್ತಿ, ವಾರ ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರ ಲೇಖನಕ್ಕೆ ಮಂಗಳ ಎಂ.ಸಿ. ವರ್ಗೀಸ್ ಪ್ರಶಸ್ತಿ, ಸುದ್ದಿ ಛಾಯಾಚಿತ್ರಕ್ಕೆ ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ, ಅರಣ್ಯ ಕುರಿತ ಲೇಖನಕ್ಕೆ ಆರ್.ಎಲ್.ವಾಸುದೇವರಾವ್ ಪ್ರಶಸ್ತಿ, ಆರ್ಥಿಕ ದುರ್ಬಲ ಬರ್ಗದವರ ಕುರಿತ ಲೇಖನಕ್ಕೆ ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ, ಗ್ರಾಮೀಣ ಜನ-ಜೀವನ ಕುರಿತ ವರದಿಗೆ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ, ಬೆಂಗಳೂರುನಗರ, ಗ್ರಾಮಾಂತರ ಜಿಲ್ಲಾ ಅಭಿವೃದ್ಧಿ ಕುರಿತ ವರದಿಗೆ ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ, ಕೃಷಿ ವರದಿಗೆ ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ, ವಿಡಂಬನಾತ್ಮಕ ಲೇಖನಕ್ಕೆ ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷ್ಣರಾಯರ ಪ್ರಶಸ್ತಿ, ಮತ್ತು ಪುಟ ವಿನ್ಯಾಸಗಾರರಿಗೆ ಪುಟ ವಿನ್ಯಾಸಕ ಪ್ರಶಸ್ತಿಯನ್ನು ಮುದ್ರಣ ಮಾದ್ಯಮದವರಿಗೂ, ಅತ್ಯುತ್ತಮ ರಾಜಕೀಯ ವಿಶ್ಲೇಷಣೆ, ತನಿಖಾ ವರದಿಗೆ, ಮಾನವೀಯ ವರದಿಗೆ ವಿದ್ಯನ್ಮಾನ ಮಾದ್ಯಮದವರಿಗೂ ನೀಡಲಾಗುವುದು.

ಪ್ರಶಸ್ತಿಗೆ ಕಳುಹಿಸಿಕೊಡುವ ಸುದ್ದಿ-ಲೇಖನಗಳು ಜನವರಿ 1, 2019 ರಿಂದ ಡಿಸೆಂಬರ್ 31, 2019ರೊಳಗೆ ಪ್ರಕಟಗೊಂಡಿರಬೇಕು. ಯಾವ ಪ್ರಶಸ್ತಿಗೆ ಎಂದು ಮುಖಪುಟದಲ್ಲಿ ಬರೆದಿರಬೇಕು. ಅನುವಾದ ಮಾಡಿದಂತಹವುಗಳಿಗೆ ಅವಕಾಶವಿರುವುದಿಲ್ಲ. ಸಂಘದ ಪದಾಧಿಕಾರಿಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಾರದು. ಸಂಘದ ಸದಸ್ಯತ್ವದ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು. ಸುದ್ದಿ-ವರದಿಗಳನ್ನು ದೃಢೀಕರಿಸಿ ಮೂರು ಪ್ರತಿಗಳಲ್ಲಿ ಸಲ್ಲಿಸಬೇಕು. ವಿದ್ಯುನ್ಮಾನ ಮಾಧ್ಯಮದವರು ವಿಡಿಯೋ ಕ್ಲಿಪಿಂಗ್‍ಗಳನ್ನು ಸಿಡಿ ರೂಪದಲ್ಲಿ, ಅದರ ಸ್ಕ್ರಿಪ್ಟ್‍ಗಳನ್ನು ಸಂಪಾದಕರಿಂದ ದೃಢೀಕರಿಸಿ ಸಲ್ಲಿಸಬೇಕಾಗಿರುತ್ತದೆ. ಲೇಖನಗಳ ಜೊತೆಯಲ್ಲಿ ಸ್ವ ಪರಿಚಯ ಮತ್ತು ಭಾವಚಿತ್ರವನ್ನು ಕಳುಹಿಸಿಕೊಡಬೇಕಾಗಿರುತ್ತದೆ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News