ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಚರಣ್ ಜೀತ್ ಸಿಂಗ್ ಚನ್ನಿ ಪ್ರಮಾಣವಚನ

Update: 2021-09-20 06:21 GMT
photo: the indian express

ಚಂಡಿಗಡ: ದಲಿತ ಸಿಖ್ ಸಮುದಾಯದ ನಾಯಕ ಚರಣ್ ಜೀತ್ ಸಿಂಗ್ ಚನ್ನಿ ಅವರು ಸೋಮವಾರ ರಾಜಭವನದಲ್ಲಿ ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಪಂಜಾಬ್ ರಾಜ್ಯಪಾಲ ಬನ್ವರ್ ಲಾಲ್ ಪುರೋಹಿತ್ ಪ್ರಮಾಣವಚನ ಬೋಧಿಸಿದರು.

ಸುಖಜಿಂದರ್ ಸಿಂಗ್ ರಂಧಾವ ಹಾಗೂ  ಒ.ಪಿ. ಸೋನಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಬ್ಬರೂ ಉಪಮುಖ್ಯಮಂತ್ರಿಗಳು ಪಂಜಾಬ್‌ನ ಮಾಜಾ ಪ್ರದೇಶದವರು. ರಂಧಾವ ಗಡಿ ಪಟ್ಟಣ ಡೇರಾ ಬಾಬಾ ನಾನಕ್‌ ಶಾಸಕರಾಗಿದ್ದರೆ, ಸೋನಿ ಅಮೃತಸರ ಸೆಂಟ್ರಲ್ ಅನ್ನು ಪ್ರತಿನಿಧಿಸುತ್ತಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದರು.

ಪ್ರಮಾಣವಚನ ಸಮಾರಂಭಕ್ಕೆ ಕೆಲವೇ ಆಯ್ದ ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು.

ರವಿವಾರ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್  ಚನ್ನಿ ಅವರನ್ನು  ಅಮರಿಂದರ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿತ್ತು.

ಚಮ್ಕೌರ್ ಸಾಹಿಬ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ 58 ರ ವಯಸ್ಸಿನ ಚನ್ನಿ ಅವರು ಪಂಜಾಬ್ ನ ಮೊದಲ ದಲಿತ ಸಿಎಂ ಎಂಬ ಹೆಗ್ಗಳಿಕೆಗೆ  ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News