ನ್ಯಾಶನಲ್ ಕಾನ್ಫರೆನ್ಸ್ ನಾಯಕನ ಹತ್ಯೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ

Update: 2021-09-20 17:19 GMT

ಹೊಸದಿಲ್ಲಿ, ಮಾ.21: ನ್ಯಾಶನಲ್ ಕಾನ್ಫರೆನ್ಸ್ ನಾಯಕ ತಾರಲೋಚನ್ ಸಿಂಗ್ ವಝೀರ್ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ 61 ವರ್ಷ ವಯಸ್ಸಿನ ಹರ್ಮೀತ್ ಸಿಂಗ್ ನನ್ನು ದಿಲ್ಲಿ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಸೆಪ್ಟೆಂಬರ್ 3ರಂದು ವಝೀರ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ಹಮೀರ್ಮಿತ್ ಸಿಂಗ್ ತಲೆ ಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಜಮ್ಮುಕಾಶ್ಮೀರ ವಿಧಾನಪರಿಷತ್ ಮಾಜಿ ಸದಸ್ಯ ವಝೀರ್ ಸೆಪ್ಟೆಂಬರ್ 9ರಂದು ದಿಲ್ಲಿಯ ಮೋತಿ ನಗರ ಪ್ರದೇಶದ ಫ್ಲಾಟ್ ಒಂದರಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯಿಂದ ಕೆಟ್ಟವಾಸನೆ ಬರುತ್ತಿದೆಯೆಂದು ನೆರೆಹೊರೆಯವರು ದೂರು ನೀಡಿದ ಬಳಿಕ ಫ್ಲಾಟ್ ಗೆ ಆಗಮಿಸಿದ ಪೊಲೀಸರಿಗೆ ಕೊಳೆತುನಾರುವ ಸ್ಥಿತಿಯಲ್ಲಿದ್ದ ಶವವು ಕಂಡುಬಂದಿತ್ತು.

ಬಂಧಿತ ಆರೋಪಿ ಸಿಂಗ್ನಿಂದ ಪೊಲೀಸರು ಅತ್ಯಾಧುನಿಕ ಪಿಸ್ತೂಲನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಮೂರನೆ ವ್ಯಕ್ತಿ ಈತನಾಗಿದ್ದಾನೆ.
 
ವಝೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜೀಂದರ್ ಚೌಧುರಿ ಯಾನೆ ರಾಜು ಗಂಜಾ (33) ಹಾಗೂ ಬಲಬೀರ್ಸಿಂಗ್ಯಾನೆ ಬಿಲ್ಲಾ (67) ಅವರನ್ನು ಸೆಪ್ಪೆಂಬರ್ 16ರಂದು ಪೊಲೀಸರು ಬಂಧಿಸಿದ್ದರ. ಅಪರಾಧ ನಡೆದ ಸ್ಥಳದ ಪರಿಸರದಲ್ಲಿ ಅವರಿದ್ದುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆದರೆ ಪ್ರಕರಣದ ನಾಲ್ಕನೆ ಆರೋಪಿ 31 ವರ್ಷ ವಯಸ್ಸಿನ ಹರಪ್ರೀತ್ 
ಸಿಂಗ್ ಅವರು ಇನ್ನೂ ತಲೆಮರೆಸಿಕೊಂಡಿದ್ದಾಏನೆ. ವಝೀರ್ ಅವರಿಗೆ ಹರ್ಪ್ರೀತ್ ಪರಿಚಿತನಾಗಿದ್ದ ಹಾಗೂ ಆತ ವಝೀರ್ರನ್ನು ಹತ್ಯೆಗೈಯಲು ಹರ್ಮೀತ್ಗೆ ಪ್ರಚೋದನೆ ನೀಡಿದ್ದನೆಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News