ಶೀಘ್ರದಲ್ಲೇ ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಮರಳಲಿದ್ದಾರೆ: ತಾಲಿಬಾನ್‌ ಘೋಷಣೆ

Update: 2021-09-21 09:16 GMT
Photo: AP

ಕಾಬೂಲ್:‌ ತನ್ನ ಸಂಪುಟದಲ್ಲಿ ಎಲ್ಲಾ ಸ್ಥಾನಗಳನ್ನು ಅಂತಿಮಗೊಳಿಸಿದ ಬಳಿಕ ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಆದಷ್ಟು ಬೇಗ ಶಾಲೆಗೆ ಮರಳಲು ಅವಕಾಶ ನೀಡಲಾಗುವುದು ಎಂದು ತಾಲಿಬಾನ್ ಮಂಗಳವಾರ ಘೋಷಿಸಿದೆ. ಬಾಲಕಿಯ ಶಿಕ್ಷಣದ ಕುರಿತು ಪ್ರಶ್ನಿಸಿದಾಗ, ನಾವು ಎಲ್ಲಾ ವಿಷಯಗಳನ್ನೂ ಅಂತಿಮಗೊಳಿಸುತ್ತಿದ್ದೇವೆ. ಅದು ಆದಷ್ಟು ಬೇಗ ಆಗುತ್ತದೆ" ಎಂದು ತಾಲಿಬಾನ್‌ ಮುಖಂಡ ಝಬಿಯುಲ್ಲಾ ಮುಜಾಹಿದ್‌ ಹೇಳಿಕೆ ನೀಡಿದ್ದಾರೆ.

ಶಿಕ್ಷಣ ಸಚಿವಾಲಯವು ಪುರುಷ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ವಾರಾಂತ್ಯದಲ್ಲಿ ಶಾಲೆಗೆ ಮರಳಲು ಆದೇಶಿಸಿದ ಬಳಿಕ ಈ ಹೇಳಿಕೆ ಕೇಳಿ ಬಂದಿದೆ. ಆದರೆ ದೇಶದ ಮಹಿಳಾ ಶಿಕ್ಷಕಿಯರು ಹಾಗೂ ಬಾಲಕಿಯರ ಕುರಿತು ಅವರು ಯಾವ ಉಲ್ಲೇಖವನ್ನೂ ಮಾಡಲಿಲ್ಲ ಎನ್ನಲಾಗಿದೆ.

ಸದ್ಯ ಮುಚ್ಚಲ್ಪಟ್ಟಿರುವ ಮಹಿಳಾ ವ್ಯವಹಾರಗಳ ಸಚಿವಾಲಯವನ್ನು ಮುಚ್ಚಲ್ಪಟ್ಟಿದ್ದು, ಈ ಕುರಿತು ಯಾವುದೇ ಉಲ್ಲೇಖವನ್ನೂ ಝಬಿಯುಲ್ಲಾ   ಮಾಡಲಿಲ್ಲ. ಆರೋಗ್ಯ ಸಚಿವಾಲಯ ಸೇರಿದಂತೆ ಹಲವು ಪ್ರಮುಖ ಖಾತೆಗಳಿಗೆ ಕಡೆಗಣಿಸಲ್ಪಟ್ಟ ಸಮುದಾಯವಾಗಿರುವ ಹಝಾರಾ ಹಾಗೂ ಪಂಜ್ಶೀರ್‌ ಪ್ರಾಂತ್ಯದ ಅಧಿಕಾರಿಗಳನ್ನು ತಾಲಿಬಾನ್‌ ನೇಮಕ ಮಾಡಿದೆ ಎಂದು ತಿಳಿದು ಬಂದಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News