ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್‌ಗೆ 12 ಲಕ್ಷ ರೂ. ದಂಡ

Update: 2021-09-22 07:11 GMT
photo: IPL

ದುಬೈ: ದುಬೈ ಅಂತರ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮಂಗಳವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್  ಕಾಯ್ದುಕೊಂಡ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಗೆ ದಂಡ ವಿಧಿಸಲಾಗಿದೆ.

 "ಐಪಿಎಲ್ ನ ನೀತಿ ಸಂಹಿತೆಯ ಅಡಿಯಲ್ಲಿ ನಿಧಾನಗತಿಯ ಬೌಲಿಂಗ್ ತಪ್ಪಿಗೆ ಸಂಬಂಧಿಸಿ ರಾಜಸ್ಥಾನ ತಂಡದ ಈ ಋತುವಿನ ಮೊದಲ ತಪ್ಪು ಇದಾಗಿದ್ದು ನಾಯಕ ಸ್ಯಾಮ್ಸನ್ ಗೆ 12 ಲಕ್ಷ ರೂ.ದಂಡ ವಿಧಿಸಲಾಗಿದೆ’’ ಎಂದು ಐಪಿಎಲ್ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಎರಡು ರನ್ ಗಳ ರೋಚಕ ಜಯ ಗಳಿಸಿದ್ದು ರಾಯಲ್ಸ್ ತಂಡದ ವೇಗದ ಬೌಲರ್ ಕಾರ್ತಿಕ್ ತ್ಯಾಗಿ ಕೊನೆಯ ಓವರ್‌ನಲ್ಲಿ ಅತ್ಯದ್ಭುತ ಬೌಲಿಂಗ್ ಮಾಡಿದ್ದರು.

ಪಂಜಾಬ್‌ ತಂಡದ ಗೆಲುವಿಗೆ ಕೊನೆಯ ಆರು ಎಸೆತಗಳಲ್ಲಿ ನಾಲ್ಕು ರನ್ ಬೇಕಾಗಿತ್ತು. ಆದರೆ, ತ್ಯಾಗಿ ಅವರು ನಿಕೋಲಸ್ ಪೂರನ್ (32) ಹಾಗೂ  ದೀಪಕ್ ಹೂಡಾ (0) ಅವರನ್ನು ಔಟ್ ಮಾಡಿದರು ಹಾಗೂ ಕೊನೆಯ ಓವರ್ ನಲ್ಲಿ  ಕೇವಲ ಒಂದು ರನ್ ನೀಡಿ ತಮ್ಮ ತಂಡವನ್ನು  ಸೋಲಿನ ದವಡೆಯಿಂದ ಪಾರು ಮಾಡಿ ಗೆಲುವನ್ನು ಕಸಿದು ಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News