ನವಜೋತ್ ಸಿಧು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾವುದೇ ತ್ಯಾಗಕ್ಕೂ ಸಿದ್ದ: ಅಮರಿಂದರ್ ಸಿಂಗ್

Update: 2021-09-22 18:07 GMT

ಹೊಸದಿಲ್ಲಿ: ಕಳೆದ ವಾರಾಂತ್ಯದಲ್ಲಿ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ  ಅಮರಿಂದರ್ ಸಿಂಗ್ ಅವರು ಇಂದು ಕಾಂಗ್ರೆಸ್ ಗೆ ಎಚ್ಚರಿಕೆಯ ಸಂದೇಶ ನೀಡಿದ್ದು, ನವಜೋತ್ ಸಿಧು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬೆದರಿಕೆ ಹಾಕಿದರು ಹಾಗೂ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯಲು ತಾನು 'ಯಾವುದೇ ತ್ಯಾಗ'ಕ್ಕೂ ಸಿದ್ದ ಎಂದು ಹೇಳಿದ್ದಾರೆ.

ತಾನು  ಮೂರು ವಾರಗಳ ಹಿಂದೆ ಸೋನಿಯಾಗಾಂಧಿಗೆ ರಾಜೀನಾಮೆ ನೀಡಲು ಮುಂದಾದಾಗ ಸಿಎಂ ಸ್ಥಾನದಲ್ಲಿ  ಮುಂದುವರಿಯುವಂತೆ ಅವರು ಕೇಳಿಕೊಂಡರು ಎಂದು ಸರಣಿ ಸಂದರ್ಶನಗಳಲ್ಲಿ' 'ಕ್ಯಾಪ್ಟನ್' ಹೇಳಿದರು.

ಪಂಜಾಬ್ ಶಾಸಕರ ತುರ್ತು ಸಭೆ ಕರೆಯಲು ಪಕ್ಷದ ಕ್ರಮವನ್ನು ಅನುಸರಿಸಿ ಸಿಂಗ್ ಅವರು ಶನಿವಾರ ರಾಜೀನಾಮೆ ನೀಡಿದ್ದರು. ತನಗೆ ಪದೇ ಪದೇ ಅವಮಾನಿಸಲಾಗಿದೆ ಎಂದು ದೂರಿದ್ದರು.

ನವಜೋತ್ ಸಿಧು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಶಕ್ತಿಮೀರಿ ಹೋರಾಡುವುದಾಗಿ ಹೇಳಿದ ಸಿಂಗ್, ದೇಶವನ್ನು 'ಅಂತಹ ಅಪಾಯಕಾರಿ ಮನುಷ್ಯ' ನಿಂದ ರಕ್ಷಿಸಲು ನಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.

ಸಿಧು ಸೋಲನ್ನು ಖಚಿತಪಡಿಸಿಕೊಳ್ಳಲು 2022 ರ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸುವೆ. ಸಿಧು ರಾಜ್ಯಕ್ಕೆ ಅಪಾಯಕಾರಿ ಎಂದು ಪುನರುಚ್ಚರಿಸಿದರು.

ರಾಹುಲ್, ಪ್ರಿಯಾಂಕಾಗೆ ಸಲಹೆಗಾರರು  'ದಾರಿ ತಪ್ಪಿಸುತ್ತಿದ್ದಾರೆ': ಅಮರಿಂದರ್ ಸಿಂಗ್ 

"ರಾಹುಲ್ ಗಾಂಧಿ ಹಾಗೂ  ಪ್ರಿಯಾಂಕಾ ಗಾಂಧಿ ವಾದ್ರಾ'ಸಾಕಷ್ಟು ಅನನುಭವಿಗಳು'  ಅವರನ್ನು ಅವರ ಸಲಹೆಗಾರರು ಸ್ಪಷ್ಟವಾಗಿ ದಾರಿ ತಪ್ಪಿಸುತ್ತಿದ್ದಾರೆ" ಎಂದು ಅಮರಿಂದರ್  ಹೇಳಿದ್ದಾರೆ.

"ಪ್ರಿಯಾಂಕಾ ಹಾಗೂ  ರಾಹುಲ್ (ಗಾಂಧಿ) ನನ್ನ ಮಕ್ಕಳಂತೆ ... ಇದು ಹೀಗೆ ಮುಗಿಯಬಾರದಿತ್ತು. ನನಗೆ ನೋವಾಗಿದೆ" ಎಂದು ಪಂಜಾಬ್ ಮಾಜಿ ಸಿಎಂ  ಹೇಳಿದರು.

"ನಾನು ಶಾಸಕರನ್ನು ಗೋವಾ ಅಥವಾ ಇತರೆಡೆ ವಿಮಾನದಲ್ಲಿ ಕರೆದೊಯ್ಯುತ್ತಿರಲಿಲ್ಲ. ನಾನು ಆ ರೀತಿ ಕಾರ್ಯನಿರ್ವಹಿಸುವುದಿಲ್ಲ. ನಾನು ಗಿಮಿಕ್ ಮಾಡುವುದಿಲ್ಲ. ಗಾಂಧಿ ಒಡಹುಟ್ಟಿದವರಿಗೆ ಅದು ನನ್ನ ಮಾರ್ಗವಲ್ಲ ಎಂದು ತಿಳಿದಿದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News