ಫೇಸ್ ಬುಕ್ ತನ್ನ ನೀತಿಗಳನ್ನು ಪಕ್ಷಾತೀತವಾಗಿ, ವಸ್ತುನಿಷ್ಠ ರೀತಿಯಲ್ಲಿ ಜಾರಿಗೊಳಿಸುತ್ತದೆ: ಅಜಿತ್ ಮೋಹನ್

Update: 2021-09-25 06:03 GMT

ಹೊಸದಿಲ್ಲಿ: ದ್ವೇಷಪೂರಿತ ಭಾಷಣಕ್ಕೆ ಕಾರಣವಾಗಿರುವ ಆಡಳಿತಾರೂಢ ಬಿಜೆಪಿ ನಾಯಕನ ವಿರುದ್ಧ ಉನ್ನತ ಕಾರ್ಯನಿರ್ವಾಹಕರು ವೀಟೋ ಮಾಡಿದ್ದಾರೆ ಎಂಬ ವರದಿಗಳನ್ನು ತಿರಸ್ಕರಿಸಿದ ಕಂಪನಿಯ ಇಂಡಿಯಾ ಕಾರ್ಯಾಚರಣೆಯ ಮುಖ್ಯಸ್ಥರು, ಫೇಸ್ಬುಕ್ ತನ್ನ ನೀತಿಗಳನ್ನು ಪಕ್ಷಾತೀತವಾಗಿ, ವಸ್ತುನಿಷ್ಠ ರೀತಿಯಲ್ಲಿ ಜಾರಿಗೊಳಿಸುತ್ತದೆ ಎಂದು ಶುಕ್ರವಾರ NDTV ಗೆ ತಿಳಿಸಿದರು. 

"ದ್ವೇಷಪೂರಿತ ಭಾಷಣ ಅಥವಾ ಹಿಂಸೆಗೆ ಕರೆ ನೀಡುವ ಭಾಷಣವನ್ನು ನಿಯಂತ್ರಿಸುವಾಗ ನಾವು ಬಹಳ ಸ್ಪಷ್ಟವಾಗಿದ್ದೇವೆ ಮತ್ತು ನಮ್ಮ ವೇದಿಕೆಗಳಲ್ಲಿ ಏನು ಅನುಮತಿಸಲಾಗಿದೆ ಹಾಗೂ ಯಾವುದು ಅಲ್ಲ ಎಂಬುದರ ಕುರಿತು ನಮ್ಮ ಸಮುದಾಯ ಮಾರ್ಗಸೂಚಿಗಳಲ್ಲಿ ಸ್ಪಷ್ಟವಾಗಿ ಹೇಳುತ್ತೇವೆ" ಎಂದು ಫೇಸ್ ಬುಕ್ ಉಪಾಧ್ಯಕ್ಷ  ಹಾಗೂ  ಭಾರತ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್  NDTV ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

"ಕಂಪನಿಯ ಯಾವುದೇ ವ್ಯಕ್ತಿಗೆ ಅನಿವಾರ್ಯವಾಗಿ 'ನೀವು ನಮ್ಮ ನೀತಿಯನ್ನು ಜಾರಿ ಮಾಡಬಾರದು' ಎಂದು ಹೇಳುವ ಅಧಿಕಾರವಿಲ್ಲ. ಆಂತರಿಕ ಸಂಭಾಷಣೆಗಳ ಗುಣಲಕ್ಷಣಗಳ ಬಗ್ಗೆ ದೋಷವು ಇದೆಯೆಂದು ನಾನು ಭಾವಿಸುತ್ತೇನೆ’’ ಎಂದು ಅವರು ಹೇಳಿದರು.

ತನ್ನ ಹಿಂದಿನ ಸಾರ್ವಜನಿಕ ನೀತಿ ನಿರ್ದೇಶಕಿ ಅಂಕಿ ದಾಸ್ ಅವರ ವಿವಾದದ ಬಗ್ಗೆ ಮೋಹನ್ ಮಾತನಾಡಿದರು. ದ್ವೇಷದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕನಿಗೆ ಉಚಿತ ಪಾಸ್ ನೀಡುವುದರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಂಕಿ ದಾಸ್ ಪಾತ್ರವಿದೆ ಎಂದು 'ವಾಲ್ ಸ್ಟ್ರೀಟ್ ಜನರಲ್' ವರದಿ ಮಾಡಿದ ಎರಡು ತಿಂಗಳ ಬಳಿಕ ದಾಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ವರದಿ ಬಂದ ಕೆಲವು ವಾರಗಳ ಬಳಿಕ ಫೇಸ್ ಬುಕ್ ಆ ನಾಯಕನಿಗೆ ನಿಷೇಧ ಹೇರಿತ್ತು. ಈ ವರದಿಯು ಕಂಪೆನಿಯ ಒಳಗೆ ಹಾಗೂ ಹೊರಗೆ ಹಿನ್ನಡೆಗೆ ಕಾರಣವಾಗಿತ್ತು.

"ನಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಯಾರೊಬ್ಬರೂ ದ್ವೇಷದ ಭಾಷಣವನ್ನು ಬಯಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಬಳಕೆದಾರರು ದ್ವೇಷದ ಭಾಷಣಕ್ಕೆ ಒಳಗಾಗುವುದು ನಮ್ಮ ಹಿತಾಸಕ್ತಿ ಎಂದು ನಾನು ಭಾವಿಸುವುದಿಲ್ಲ ... ನಮ್ಮ ಆರ್ಥಿಕ ಪ್ರೋತ್ಸಾಹವು ನಮ್ಮ ವೇದಿಕೆಯಲ್ಲಿ ಸರಿಯಾದ ಕೆಲಸ ಮಾಡುವ ಪರವಾಗಿ ಇರುತ್ತದೆ " ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News