ಯುಎಇ : ಉಪಪ್ರಧಾನಿ, ವಿತ್ತಸಚಿವರಾಗಿ ಶೇಖ್ ಮಕ್ತೂಮ್ ನೇಮಕ

Update: 2021-09-25 18:06 GMT

ದುದೈ, ಸೆ.25:  ಯುಎಇಯ ಸಚಿವ ಸಂಪುಟವನ್ನು ಪುನರ್‌ರಚಿಸಿದ್ದು ಶೇಖ್ ಮಕ್ತೂಮ್ ಬಿನ್ ರಶೀದ್ ಅಲ್ ಮಕ್ತೂಮ್‌ರನ್ನು ಉಪಪ್ರಧಾನಿ ಮತ್ತು ವಿತ್ತಸಚಿವರನ್ನಾಗಿ ನೇಮಿಸಲಾಗಿದೆ ಎಂದು ದುಬೈಯ ದೊರೆ ಶನಿವಾರ ಹೇಳಿದ್ದಾರೆ. ಅಲ್ಲದೆ ಒಕ್ಕೂಟ ಸರಕಾರ ಮುಂದಿನ 50 ವರ್ಷದವರೆಗೆ ಕಾರ್ಯನಿರ್ವಹಿಸುವ ವಿಧಾನವನ್ನೂ ಇದೇ ಸಂದರ್ಭ ಅಂಗೀಕರಿಸಲಾಗಿದೆ . ಕಾಲಕ್ಕೆ ತಕ್ಕಂತೆ ನಮ್ಮ ಯೋಜನೆ, ನಿರೂಪಣೆಯನ್ನು ಪರಿಷ್ಕರಿಸಬೇಕಾಗಿದೆ . ನಮ್ಮ ಸಾಧನೆಗೆ ವೇಗ ನೀಡುವ , ಆದ್ಯತಾ ಕಾರ್ಯವನ್ನು ನಿಗದಿಗೊಳಿಸುವ , ಬಜೆಟ್ ಹಾಗೂ ಯೋಜನೆಗಳನ್ನು ಅನುಮೋದಿಸುವ ನೂತನ ವಿಧಾನದ ಅಗತ್ಯ ನಮಗಿದೆ ಎಂದು ದೊರೆ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಹೇಳಿದ್ದಾರೆ.

ಯುಎಇಯ ಈ ಹಿಂದಿನ ಯೋಜನೆ ಎಮಿರೇಟ್ಸ್ ವಿಷನ್-2021 ಕಳೆದ 10 ವರ್ಷದಲ್ಲಿ ನಿಗದಿಗೊಳಿಸಿದ್ದ ಗುರಿ ತಲುಪಿದೆ. ಪ್ರಸ್ತುತ ದೇಶವು ವಿಶ್ವದ ಅಭಿವೃದ್ಧಿ ಸೂಚ್ಯಂಕದಲ್ಲಿರುವ 100 ಅಗ್ರರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News