ರಶೀದ್ ಖಾನ್

Update: 2021-09-26 12:17 GMT

ವಿಟ್ಲ :  ಮಾಣಿ ‌ಸಮೀಪದ ಹಳೀರ ನಿವಾಸಿ  ಉದ್ಯಮಿ ರಶೀದ್ ಖಾನ್ (65) ಅಲ್ಪಕಾಲದ ಅನಾರೋಗ್ಯ ರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಬೆಳಗ್ಗೆ ನಿಧನರಾದರು.

ಮೂಲತ: ಬೆಂಗಳೂರು ನಿವಾಸಿಯಾದ ಇವರು ಕಳೆದ 40 ವರ್ಷಗಳಿಂದ ಮಾಣಿಯಲ್ಲಿ ನೆಲೆಸಿದ್ದು ನ್ಯೂ ಕ್ವಾಲಿಟಿ ಸ್ಟೀಲ್ ಫರ್ನಿಚರ್ (ಕಪಾಟು), ಆಡು ಮತ್ತು ಕೋಳಿ ಮಾಂಸದ ಉದ್ಯಮ ನಡೆಸುತ್ತಿದ್ದರು.

ಮೃತರು ಪತ್ನಿ, ಐವರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ