ಬೆಂಗಳೂರಿನಲ್ಲಿ ಧಾರಕಾರ ಮಳೆ

Update: 2021-09-27 18:29 GMT

ಬೆಂಗಳೂರು, ಸೆ.27: ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಸೋಮವಾರ ಗುಡುಗು ಸಹಿತ ಭಾರೀ ಮಳೆ ಸುರಿಯಿತು.

ಇಲ್ಲಿನ ಮೆಜೆಸ್ಟಿಕ್, ಶಾಂತಿನಗರ, ಆರ್‍ಟಿನಗರ, ಹೆಬ್ಬಾಳ, ಎಚ್‍ಬಿಆರ್, ಬಿಟಿಎಂ ಲೇಔಟ್, ಮಡಿವಾಳ ಸೇರಿದಂತೆ ವಿವಿಧೆಡೆ ಮಳೆ ಸುರಿದಿದ್ದು, ಕೆಲಕಡೆ ಮರಗಳು ನೆಲಕ್ಕುರುಳಿವೆ. 

ಮಹಿಳೆಯಿಂದ ನಗರದ ಕೆಲ ಕೆಳಸೇತುವೆ, ರಸ್ತೆಗಳಲ್ಲಿ ನೀರು ನುಗ್ಗಿದ್ದು, ವಾಹನ ಸವಾರರು ಮನೆ ಸೇರಲು ಪರದಾಡುವಂತಾಯಿತು. ಭಾರಿ ಮಳೆಯಿಂದ ಇಲ್ಲಿನ ಎಂ.ಜಿ ರಸ್ತೆ, ಮಲ್ಲೇಶ್ವರಂ, ಮೈಸೂರು ರಸ್ತೆ, ರಾಜಭವನ ರಸ್ತೆ, ಶಿವಾಜಿನಗರ, ರಾಜಾಜಿನಗರ, ಪ್ಯಾಲೇಸ್ ಗುಟ್ಟಹಳ್ಳಿ, ಹಲಸೂರು, ಶಿವಾನಂದ ವೃತ್ತ, ಕೆಆರ್‍ಪುರಂ ಸೇರಿ ಪ್ರಮುಖ ರಸ್ತೆಗಳಲ್ಲಿ ಅರ್ಧ ಅಡಿಯಷ್ಟು ನೀರು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News