×
Ad

ರಾಹುಲ್‌ ಗಾಂಧಿ ವಿರುದ್ಧ ʼಅಸಭ್ಯʼ ಭಾಷೆ ಬಳಸಿದ ಟೈಮ್ಸ್‌ ನೌ ನಿರೂಪಕಿ ನಾವಿಕ ಕುಮಾರ್‌

Update: 2021-09-29 15:02 IST
Photo: Twitter

 ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕುರಿತಾದಂತೆ ಅನುಚಿತ ಪದ ಬಳಕೆ ಮಾಡಿದ್ದ ಟೈಮ್ಸ್‌ ನೌ ಹಿರಿಯ ನಿರೂಪಕಿ ನಾವಿಕ ಕುಮಾರ್‌ ವಿರುದ್ಧ ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಕ್ಷಮೆಯಾಚಿಸಿದ್ದಾರೆ.

ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ಸಂದರ್ಭದಲ್ಲಿ ಗಣ್ಯ ಅಥಿತಿಗಳ ಸಮ್ಮುಖದಲ್ಲೇ ನಾವಿಕ ಕುಮಾರ್‌ ರಾಹುಲ್‌ ಗಾಂಧಿ ಕುರಿತು ಅನುಚಿತ ಪದ ಬಳಕೆ ಮಾಡಿದ್ದರು. ಈ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು. ಕಾಂಗ್ರೆಸ್‌ ಕಾರ್ಯಕರ್ತರು ಸೇರಿದಂತೆ ಹಲವು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ನಾವಿಕಾ ಕುಮಾರ್‌ ತಮ್ಮ ಸಾಮಾಜಿಕ ತಾಣ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದರು.

ಬಳಿಕ ಟೈಮ್ಸ್‌ ನೌ ವಾಹಿನಿ ಕ್ಷಮೆಯಾಚನೆಯ ವೀಡಿಯೋ ಪ್ರಕಟಿಸಿದ್ದು, "ನಾನು ನನ್ನ ವೃತ್ತಿಬದುಕಿನಲ್ಲಿ ಇದುವರೆಗೂ ಪ್ರಮಾದಗಳನ್ನು ಎಸಗಿಲ್ಲ. ಇದು ನನ್ನ ಮೊದಲನೆಯ ತಪ್ಪಾಗಿದೆ. ನಾನು ಪದಬಳಕೆ ಮಾಡಿದ್ದು ಸಂಪೂರ್ಣ ಅನಿರೀಕ್ಷಿತವಾಗಿತ್ತು. ಯಾರನ್ನೂ ತೆಗಳುವ ನೋಯಿಸುವ ಉದ್ದೇಶ ನನಗಿರಲಿಲ್ಲ. ಮಾಡಿದ ತಪ್ಪಿಗೆ ಕ್ಷಮೆ ಕೇಳುವುದರಲ್ಲಿ ಯಾವುದೇ ಹಿಂಜರಿಕೆ ನನಗಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮಿಸಬೇಕು" ಎಂದು ನಾವಿಕ ಕುಮಾರ್‌ ಹೇಳುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ಟೈಮ್ಸ್‌ ನೌ ಪ್ರಕಟಿಸಿದೆ.

"ನಮಗೆ ನಿಮ್ಮ ʼಕ್ಲಾರಿಫಿಕೇಶನ್‌ʼ ನ ಅಗತ್ಯವಿಲ್ಲ, ನೀವು ಜನರೊಂದಿಗೆ ʼಕ್ಷಮೆʼ ಯಾಚಿಸಬೇಕು" ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News