ಬೆಂಗಳೂರು; 27 ಲಕ್ಷ ರೂ. ಮೌಲ್ಯದ ಗಾಂಜಾ, ಹ್ಯಾಶಿಷ್ ಆಯಿಲ್ ವಶ, ಇಬ್ಬರ ಬಂಧನ

Update: 2021-10-02 12:04 GMT

ಬೆಂಗಳೂರು, ಅ.2: ಸಾರ್ವಜನಿಕರಿಗೆ ಗಾಂಜಾ ಮತ್ತು ಹ್ಯಾಶಿಶ್ ಆಯಿಲ್ ಅನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ, 27 ಲಕ್ಷ ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಆಂಧ್ರಪ್ರದೇಶ ಮೂಲದ ಗಂಡ್ರ ದಿನೇಶ್‍ಕುಮಾರ್(19) ಮತ್ತು ನಗರದ ಅರುಣ(22) ಎಂದು ಗುರುತಿಸಲಾಗಿದೆ. ಇವರಿಂದ 2 ಲಕ್ಷ ರೂ.ಮೌಲ್ಯದ 5 ಕೆ.ಜಿ. 100 ಗ್ರಾಂ ಗಾಂಜಾ, 25 ಲಕ್ಷ ಬೆಲೆ ಬಾಳುವ 540 ಗ್ರಾಂ ನಿಷೇಧಿತ ನಿದ್ರಾಜನಕ ಹಾಶಿಶ್ ಆಯಿಲ್, ಮೊಬೈಲ್ ಮತ್ತು 1200 ರೂ.ನಗದು ವಶಪಡಿಸಿಕೊಳ್ಳಲಾಗಿದೆ.

ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News