ಬೆಂಗಳೂರಿನಲ್ಲಿ ವಾಲಿದ ಹೊಸ ಕಟ್ಟಡ: ಬಿಬಿಎಂಪಿಯಿಂದ ನೋಟಿಸ್

Update: 2021-10-05 12:34 GMT

ಬೆಂಗಳೂರು, ಅ.5: ಹೊಸ ಕಟ್ಟಡವೊಂದು ಪಕ್ಕಕ್ಕೆ ವಾಲಿರುವ ಘಟನೆ ಆರ್ ಆರ್ ನಗರ ವ್ಯಾಪ್ತಿಯ ಪೂರ್ಣಚಂದ್ರ ಗೂಪ್ ಡಿ ಲೇಔಟಿನ ಶ್ರೀಗಂಧ ಕಾವಲುನಲ್ಲಿ ನಡೆದಿದ್ದು, ಕೂಡಲೇ ಕಟ್ಟಡ ತೆರವು ಮಾಡುವಂತೆ ಮನೆ ಮಾಲಕರಿಗೆ ಬಿಬಿಎಂಪಿ ನೋಟಿಸ್ ನೀಡಿದೆ. 

ರವಿವಾರ ರಾತ್ರಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಪೂರ್ಣಚಂದ್ರ ಗೂಪ್ ಡಿ ಲೇಔಟ್ ಪ್ರದೇಶಕ್ಕೆ ಭೇಟಿಯನ್ನು ನೀಡಿದ್ದರು. ಈ ವೇಳೆಯಲ್ಲಿ ಮೂರು ಅಂತಸ್ತಿನ ವಸತಿ ಕಟ್ಟಡವೊಂದು ಪಕ್ಕಕ್ಕೆ ವಾಲಿರುವುದು ಪತ್ತೆಯಾಗಿತ್ತು. ಜತೆಗೆ ಮನೆಯ ಗೋಡೆಯಲ್ಲಿ ಬಿರುಕು ಬಿಟ್ಟಿರುವುದು ಕಂಡು ಬಂದಿದೆ. 

ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಬಾಡಿಗೆಗೆ ಇದ್ದವರನ್ನು ಖಾಲಿ ಮಾಡಿಸಿದ್ದಾರೆ. ಮಂಜೂರಾತಿ ನಕ್ಷೆ ಪತ್ರ, ಪರವಾನಿಗೆ ಪತ್ರ, ಆರಂಭಿಕ ಪ್ರಮಾಣ ಪತ್ರ, ಸ್ವಾಧೀನಾನುಭವ ಪ್ರಮಾಣ ಪತ್ರ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಮಾಲಕರಿಗೆ ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮನೆ ಮಾಲಕ ರಾಜೇಶ್ ರಾಮಕೃಷ್ಣ, ತಾನು ಈ ಮನೆಯನ್ನು ನಿರ್ಮಾಣ ಮಾಡಿಲ್ಲ. ಬದಲಾಗಿ ತನ್ನ ಪತ್ನಿಯ ಅಣ್ಣ ಮನೆಯನ್ನು ಉಡುಗೊರೆ ಆಗಿ ನೀಡಿದ್ದಾರೆ. ಆದರೆ ಬಿಬಿಎಂಪಿ ಆದೇಶವನ್ನು ಪಾಲಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News