ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನ

Update: 2021-10-07 17:56 GMT

ಬೆಂಗಳೂರು, ಅ. 7: ರಾಜ್ಯ ಸರಕಾರ ಸಚಿವಾಲಯ ಗ್ರಂಥಾಲಯದಲ್ಲಿ 2021-22ರ ಸಾಲಿಗೆ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ತರಬೇತಿಗಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗ್ರಾಜುಯೇಟ್ ಅಪ್ರೆಂಟಿಸ್ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) 4 ಹುದ್ದೆಗಳಿಗೆ ಲೈಬ್ರರಿ ಸೈನ್ಸ್‍ನಲ್ಲಿ ಪದವಿ(ಬಿಎಲ್‍ಐಎಸ್‍ಸಿ) ಪಡೆದ ಅಭ್ಯರ್ಥಿಗಳಿಗೆ ತಿಂಗಳಿಗೆ 10 ಸಾವಿರ ರೂ. ಸ್ಟೈಪೆಂಡ್ ನೀಡಲಾಗುವುದು. ಟೆಕ್ನೀಷಿಯನ್ ಅಪ್ರೆಂಟಿಸ್ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) 6 ಹುದ್ದೆಗಳಿಗೆ ಲೈಬ್ರರಿ ಸೈನ್ಸ್ ಡಿಪ್ಲೊಮಾ ಅಭ್ಯರ್ಥಿಗಳಿಗೆ ತಿಂಗಳಿಗೆ 8 ಸಾವಿರ ರೂ., ಟೆಕ್ನೀಷಿಯನ್ ಅಪ್ರೆಂಟಿಸ್ (ಕಮರ್ಷಿಯಲ್ ಪ್ರಾಕ್ಟಿಸ್) 1 ಹುದ್ದೆಗೆ ಕಮರ್ಷಿಯಲ್ ಪ್ರಾಕ್ಟಿಸ್‍ನಲ್ಲಿ ಡಿಪ್ಲೊಮಾ ಅಭ್ಯರ್ಥಿಗಳಿಗೆ ತಿಂಗಳಿಗೆ 8ಸಾವಿರ ರೂ.ಸ್ಟೈಪೆಂಡ್ ನಿಗದಿಪಡಿಸಲಾಗಿರುತ್ತದೆ.

ನಿಗದಿತ ಶಿಕ್ಷಣಾರ್ಹತೆಯನ್ನು 2019ರ ಮೇ ತಿಂಗಳ ನಂತರ ಪಡೆದವರು ಮಾತ್ರ ಈ ತರಬೇತಿಗೆ ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಮೀಸಲಾತಿಯ ಆಧಾರದ ಮೇಲೆ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರಾಗಿದ್ದರೆ ಅಂತಹವರು ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಮುಕ್ತ ವಿಶ್ವ ವಿದ್ಯಾನಿಲಯ/ದೂರ ಶಿಕ್ಷಣದ ಮೂಲಕ ಪದವಿಗಳನ್ನು ಪಡೆದ ಅಭ್ಯರ್ಥಿಗಳನ್ನು ತರಬೇತಿಗೆ ಪರಿಗಣಿಸುವುದಿಲ್ಲ.

ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಮುಖ್ಯ ಗ್ರಂಥಾಧಿಕಾರಿ, ಸಚಿವಾಲಯ ಗ್ರಂಥಾಲಯ, ಕೊಠಡಿ ಸಂಖ್ಯೆ-11 ನೆಲಮಹಡಿ, ವಿಧಾನಸೌಧ, ಬೆಂಗಳೂರು-01 ಇವರಿಗೆ ಅ.25ರೊಳಗೆ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆ

ಚ್ಚಿನ ಮಾಹಿತಿಗೆ ದೂ.ಸಂಖ್ಯೆ: 080-22033462/3011 ಅಥವಾ ಇ-ಮೇಲ್ ವಿಳಾಸ: secretariat library@gmail. com ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News