×
Ad

ಅ.14ರಿಂದ ಬೆಂಗಳೂರಿನಲ್ಲಿ ಚಲನಚಿತ್ರೋತ್ಸವ

Update: 2021-10-08 22:13 IST

ಬೆಂಗಳೂರು, ಅ.8: ನಗರದ ಇನ್ನೋವೇಟಿವ್ ಫಿಲಂ ಅಕಾಡೆಮಿ ವತಿಯಿಂದ ಅ.14ರಿಂದ ಅ.17ರವರೆಗೆ ಅಂತರ್‍ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ.

ಚಲನಚಿತ್ರೋತ್ಸವದಲ್ಲಿ 30 ದೇಶಗಳ 45 ಭಾಷೆಗಳ 108 ಚಲನಚಿತ್ರಗಳನ್ನು ನಗರದ ಮಾರತಹಳ್ಳಿಯಲ್ಲಿರುವ ಇನ್ನೋವೇಟಿವ್ ಮಲ್ಟಿಫ್ಲೆಕ್ಸ್‍ನ 9 ಸ್ಕ್ರೀನ್‍ಗಳಲ್ಲಿ ಪ್ರದರ್ಶಿಸಲಾಗುವುದು.

ಥೈಲೆಂಡ್, ಇಂಡೋನೇಷ್ಯಾ, ಆಸ್ಟ್ರಿಯಾ, ಸ್ಪೇನ್, ಪೊಲೆಂಡ್, ದಕ್ಷಿಣ ಕೊರಿಯಾ, ಶ್ರೀಲಂಕಾ ಸೇರಿದಂತೆ ವಿದೇಶಗಳ ಚಿತ್ರನಿರ್ಮಾಪಕರು ಆಗಮಿಸಲಿದ್ದು, 4 ದಿನಗಳ ಈ ಚಲನಚಿತ್ರೋತ್ಸವದ ಕಾರ್ಯಾಗಾರ ಮತ್ತು ಚರ್ಚಾಕೂಟಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಅಕಾಡೆಮಿ ತಿಳಿಸಿದೆ.

ಚಲನಚಿತ್ರೋತ್ಸವದಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವನ್ನು ಕಲ್ಪಿಸಿದ್ದು, ಆಸಕ್ತರು http://innovativefilmacademy.com/iiff-2021/ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದು, ಹಾಗೆಯೇ ಚಲನಚಿತ್ರೋತ್ಸವದ ವಿವರ ಮತ್ತು ವೇಳಾಪಟ್ಟಿಯನ್ನು ಸಹ ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News