×
Ad

ಬೆಂಗಳೂರು: ನಗರದಲ್ಲಿ ಧಾರಾಕಾರ ಮಳೆ, ಜನ ಜೀವನ ಅಸ್ತವ್ಯಸ್ತ

Update: 2021-10-09 19:42 IST

ಬೆಂಗಳೂರು, ಅ.9: ನಗರದಲ್ಲಿ ಶನಿವಾರ ಮುಂಜಾನೆಯಿಂದಲೇ ಮಳೆ ಬಿಟ್ಟೂಬಿಡದೆ ಸುರಿಯಲು ಶುರುವಾಗಿತ್ತು. ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು.   

ಕಾರ್ಪೋರೇಷನ್ ಸರ್ಕಲ್, ಎಸ್‍ಆರ್ ನಗರ, ಮೆಜೆಸ್ಟಿಕ್, ಶೇಷಾದ್ರಿಪುರಂ, ಕೆಆರ್ ಮಾರ್ಕೆಟ್, ಲಾಲ್‍ಬಾಗ್, ಜಯನಗರ, ಶಾಂತಿನಗರ ಸೇರಿ ಹಲವೆಡೆ ಭಾರೀ ಮಳೆಯಾಗಿದೆ. ಪರಿಣಾಮವಾಗಿ ವಾಹನ ಸವಾರರ ಪರದಾಡಿದ್ದು, ಫ್ಲೈ ಓವರ್ ಕೆಳಗೆ ಆಸರೆ ಪಡೆದಿದ್ದರು. ಅಲ್ಲದೇ ಟ್ರಾಫಿಕ್ ಸಮಸ್ಯೆ ಉಂಟಾಗಿ ಕೆಲಕಾಲ ವಾಹನ ಸವಾರರು ಹರಸಾಹಸಪಟ್ಟರು. 

ಈಗಾಗಲೇ ನಿರಂತರ ಮಳೆಯಿಂದಾಗಿ ನಗರದಲ್ಲಿ ಸಾಲುಸಾಲು ಅನಾಹುತಗಳು ಸಂಭವಿಸಿದ್ದು, ನಗರದ ಬಹುತೇಕ ಎಲ್ಲಾ ರಾಜಕಾಲುವೆಗಳು ನಿರಂತರ ಮಳೆಯಿಂದಾಗಿ ತುಂಬಿ ಹರಿಯುತ್ತಿವೆ.

ದಾಸರಹಳ್ಳಿ, ಬಾಗಲಗುಂಟೆ, ಹೆಸರಘಟ್ಟ, ಮಾದನಾಯಕನಹಳ್ಳಿ ಸೇರಿದಂತೆ ನಗರದ ಹೊರವಲಯದಲ್ಲೂ ಧಾರಾಕಾರ ಮಳೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News