ಬೆಂಗಳೂರು: 2.35 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

Update: 2021-10-09 17:07 GMT

ಬೆಂಗಳೂರು, ಅ.9: ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 2.35 ಕೋಟಿ ರೂಗಳ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಶಾರ್ಜಾ ಮತ್ತು ದುಬೈನಿಂದ ಗುದದ್ವಾರದಲ್ಲಿ ಚಿನ್ನದ ಪೇಸ್ಟ್ ಇಟ್ಟುಕೊಂಡು ಬಂದಿದ್ದ 18 ಮಂದಿ ಪ್ರಯಾಣಿಕರನ್ನು ಏರ್ಪೋರ್ಟ್‍ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಅವರಿಂದ 2.35 ಕೋಟಿ ರೂ. ಮೌಲ್ಯದ 4.944 ಗ್ರಾಂ ಚಿನ್ನದ ಪೇಸ್ಟ್ ವಶಕ್ಕೆ ಪಡೆದುಕೊಂಡಿದ್ದಾರೆ. 

ಆರೋಪಿಗಳ ಪೈಕಿ 17 ಮಂದಿ ಶಾರ್ಜಾದಿಂದ ಮತ್ತು ಒಬ್ಬ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು ಅವರ ವರ್ತನೆಯಿಂದ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ದೇಹವನ್ನು ಸ್ಕ್ಯಾನಿಂಗ್ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಪ್ಯಾಂಟ್ ಮತ್ತು ಒಳ ಉಡುಪುಗಳಲ್ಲಿ ಚಿನ್ನಾಭರಣಗಳನ್ನು ಇಟ್ಟುಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News