ಬೆಂಗಳೂರಿನಲ್ಲಿ ಅನುಮಾನಾಸ್ಪದ ಸೂಟ್‍ಕೇಸ್; ಸ್ಥಳೀಯರ ಆತಂಕ ದೂರ ಮಾಡಿದ ಪೊಲೀಸರು

Update: 2021-10-13 16:56 GMT
photo: twitter@KiranParashar21
 

ಬೆಂಗಳೂರು, ಅ.13: ರಾಜಧಾನಿ ಬೆಂಗಳೂರಿನ ಜನದಟ್ಟಣೆ ಪ್ರದೇಶವಾಗಿರುವ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಅನಾಮಧೇಯ ಸೂಟ್‍ಕೇಸ್‍ವೊಂದು ಆತಂಕ್ಕೆ ಎಡೆಮಾಡಿ ಕೊಟ್ಟಿತ್ತು. 

ಬುಧವಾರ ಮಧ್ಯಾಹ್ನ ಸುಮಾರಿಗೆ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ವಾಹನ ನಿಲ್ಲಿಸಿದ್ದ ಬೈಕ್ ಬಳಿ ಕಪ್ಪು ಬಣ್ಣದ ಸೂಟ್‍ಕೇಸ್ ಕಂಡು ಅಂಗಡಿ ಮಾಲಕರು ಮತ್ತು ಸಾರ್ವಜನಿಕರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. 

ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಹತ್ತಿರ ಬರದಂತೆ ತಡೆದಿದ್ದಾರೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಿಬ್ಬಂದಿ ಆಗಮಿಸಿ ಸೂಟ್‍ಕೇಸ್ ತೆರೆದು ಪರೀಕ್ಷಿಸಿದ್ದು, ಸೂಟ್‍ಕೇಸ್‍ನಲ್ಲಿ ಸೀರೆ ಮತ್ತು ಬಟ್ಟೆಗಳು ಮಾತ್ರ ಪತ್ತೆಯಾಗಿದೆ, ಇತರ ಅನುಮಾನಾಸ್ಪದ ವಸ್ತುಗಳಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News