ರಾಜ ಜಯಚಂದ್ ವಂಚಕ ಅಲ್ಲ, ಶೂರ ಆಡಳಿತಗಾರ: ರಜಪೂತ ಸಮುದಾಯದ ನಾಯಕರು

Update: 2021-10-16 19:25 GMT

ಹೊಸದಿಲ್ಲಿ: ರಾಜ ಜಯಚಂದ್ ಶೂರ ಆಡಳಿತಗಾರ. ವಂಚಕ ಅಲ್ಲ ಎಂದು ರಜಪೂತ ಸಮುದಾಯದ ನಾಯಕರು ಪ್ರತಿಪಾದಿಸಿದ್ದಾರೆ.

ನಮಗೆ ಬೋಧಿಸಿದ ಚರಿತ್ರೆಯಲ್ಲಿ 9ನೇ ಶತಮಾನದ ರಜಪೂತ ರಾಜ ಜಯಚಂದ್ ವಂಚಕ ಎಂದು ಹೇಳಲಾಗಿದೆ. ಮುಹಮ್ಮದ್ ಘೋರಿಯ ಅಫ್ಘಾನ್ ಪಡೆಯ ವಿರುದ್ಧದ ಎರಡನೇ ಟರೈನ್ ಯುದ್ಧದಲ್ಲಿ ಜೈಚಂದ್ ಪೃಥ್ವಿರಾಜ್ ಚೌಹಾನ್ (3ನೇ ಪೃಥ್ವಿರಾಜ್ )ಗೆ ವಂಚಿಸಿದ್ದ ಎಂದು ತಿಳಿಸಲಾಗಿದೆ.

ಜನಪ್ರಿಯ ಗ್ರಹಿಕೆಯ ಪ್ರಕಾರ ತನ್ನ ವೈರಿಯಾಗಿದ್ದ ಚೌಹಾನ್ ಅನ್ನು ಸೋಲಿಸಲು ಪಿತೂರಿ ನಡೆಸುವ ಮೂಲಕ ಭಾರತದಲ್ಲಿ ಕಾಲಿರಿಸಲು ಘೋರಿಗೆ ಜಯಚಂದ್ ನೆರವು ನೀಡಿದ್ದ. ಆದರೆ, ಈ ಪ್ರತಿಪಾದನೆ ಬಗ್ಗೆ ರಜಪೂತ ಸಮುದಾಯ ಆಕ್ಷೇಪ ಎತ್ತಿದೆ. ಅಲ್ಲದೆ, ಇದು ಆಧಾರ ರಹಿತ ಹಾಗೂ ಚಾರಿತ್ರಿಕ ಪ್ರಮಾದ ಎಂದು ಹೇಳಿದೆ.

ಟರೈನ್ ಯುದ್ಧದ 400 ವರ್ಷಗಳ ಬಳಿಕ ಬರೆದ ಐನ್-ಐ-ಅಕ್ಬರಿಯಿಂದ ಜಯಚಂದ್ ವಂಚಕ ಎಂಬ ಆರೋಪ ಬಂದಿದೆ ಎಂದು ಅವರು ಹೇಳಿದ್ದಾರೆ.
  
ಈ ಮಿಥ್ಯೆಯನ್ನು ಮತ್ತೆ ಹಲವು ಪಠ್ಯಗಳಲ್ಲಿ ಮರು ಬರೆಯಲಾಗಿದೆ. ಅನಂತರ ಯಾವುದೇ ಚಾರಿತ್ರಿಕ ಆಧಾರವಿಲ್ಲದೆ ಇದನ್ನು ಹಬ್ಬಿಸಲಾಗಿದೆ. ‘ಪೃಥ್ವಿರಾಜ್ ರಾಸೊ’ ನಲ್ಲಿ ಜಯಚಂದ್ ಹಾಗೂ ಪೃಥ್ವಿರಾಜ್ ನಡುವೆ ವೈರತ್ವ ಇತ್ತು ಎಂದು ಉಲ್ಲೇಖಿಸಲಾಗಿದೆ. ಆದರೆ, ದ್ವೇಷ ತೀರಿಸಲು ಜಯಚಂದ್ ಘೋರಿಯನ್ನು ಆಹ್ವಾನಿಸಿದ ಎಂಬ ಆರೋಪ ಇಲ್ಲ.

‘‘ಪೃಥ್ವಿರಾಜ್ ರಾಸೊ ಲೇಖಕ ಚಾಂದ್ ಬರ್ದಾಯಿ ಪೃಥ್ವಿರಾಜ್ ಚೌಹಾನ್ ಅವರ ಆಸ್ಥಾನ ಕವಿ ಎಂಬುದು ವಿವಾದಿತ ವಿಚಾರ. ಆತ ಪೃಥ್ವಿರಾಜ್ ಅವರ ಸಮಕಾಲೀನ ಎಂಬುದನ್ನು ಹಲವು ಇತಿಹಾಸಕಾಕರು ಒಪ್ಪಿಕೊಳ್ಳುತ್ತಿಲ್ಲ’’ ಎಂದು ಅಖಿಲ ಭಾರತೀಯ ಕೃತ್ರೀಯ ಮಹಾಸಭಾದ ಅಧ್ಯಕ್ಷ ಮಹೇಂದ್ರ ಸಿಂಗ್ ತನ್ವರ್ ಅವರು ಹೇಳಿದ್ದಾರೆ.

ಜಯಚಂದ್ ಪೃಥ್ವಿರಾಜ್ ಚೌಹಾನ್ಗೆ ವಂಚಿಸಿಲ್ಲ ಎಂಬುದನ್ನು ಸಾಬೀತುಪಡಿಸಲು ಪಠ್ಯಗಳ ರೂಪದಲ್ಲಿ ಸಾಕಷ್ಟು ಚಾರಿತ್ರಿಕ ಸಾಕ್ಷಗಳು ಇವೆ ಎಂದು ಕ್ಷತ್ರೀಯ ಪರಿಷತ್ ನ ಸಂಚಾಲಕ ಕುನ್ವರ್ ಸಂಜೀವ್ ಸಿಂಗ್ ಹೇಳಿದ್ದಾರೆ.

ಬನಾರಸ್ ಹಾಗೂ ಕನೌಜದ ಆಡಳಿತಾಗಾರ ಜಯಚಂದ್ ಘೋರಿ ಪಡೆಯ ವಿರುದ್ಧ ಹೋರಾಡಲು ತನ್ನ ಪ್ರಾಣವನ್ನೇ ಮುಡಿಪಾಗಿರಿಸಿದ ವೀರ ರಾಜ ಎಂದು ಚಾರಿತ್ರಿಕೆ ಪಠ್ಯಗಳನ್ನು ಉಲ್ಲೇಖಿಸಿ ರಜಪೂತ ಸಮುದಾಯದ ಸಂಶೋಧಕರ ತಂಡ ಪ್ರತಿಪಾದಿಸಿದೆ.

Writer - ಹೊಸದಿಲ್ಲಿ:

contributor

Editor - ಹೊಸದಿಲ್ಲಿ:

contributor

Similar News