ಬೆಂಗಳೂರು; ವಾಲಿದ ಪೊಲೀಸ್ ಕಟ್ಟಡ: ಕುಟುಂಬಗಳು ಸ್ಥಳಾಂತರ

Update: 2021-10-17 15:53 GMT

ಬೆಂಗಳೂರು, ಅ.17: ನಗರದ ಬಿನ್ನಿಮಿಲ್ ಪೊಲೀಸ್ ವಸತಿ ಗೃಹ ಕಟ್ಟಡ ಬಿರುಕು ಸಂಬಂಧ ಪೊಲೀಸ್ ಕುಟುಂಬಗಳನ್ನು ಹಂತಹಂತವಾಗಿ ಖಾಲಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶನಿವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿನ್ನಿಮಿಲ್ ವಸತಿಗೃಹದಲ್ಲಿರುವ ಪೊಲೀಸ್ ಕುಟುಂಬಗಳನ್ನು ನಾಗರಬಾವಿ ಪೊಲೀಸ್ ವಸತಿ ಗೃಹಕ್ಕೆ ಸ್ಥಳಾಂತರಿಸಲು ಸೂಚಿಸಿದ್ದಾರೆ. 

ಇಲ್ಲಿನ ಬಿ ಬ್ಲಾಕ್‍ನಲ್ಲಿ ಒಟ್ಟು 64 ಪೊಲೀಸ್ ಕುಟುಂಬಗಳು ವಾಸವಾಗಿವೆ. ಸದ್ಯ 32 ಕುಟುಂಬಗಳಿಗೆ ಮನೆ ಖಾಲಿ ಮಾಡಲು ಸೂಚಿಸಲಾಗಿದೆ. ಇನ್ನುಳಿದ ಕುಟುಂಬಗಳಿಗೆ ಯಾವುದೇ ಸೂಚನೆ ಬಂದಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News