ಬೆಂಗಳೂರಿನಲ್ಲಿ ನಕಲಿ ಬಿಎಂಟಿಸಿ ಅಧಿಕಾರಿಯ ಬಂಧನ

Update: 2021-10-18 16:52 GMT

ಬೆಂಗಳೂರು, ಅ.18: ಬಿಎಂಟಿಸಿ ಘಟಕವೊಂದರಲ್ಲಿ ಸಹಾಯಕ ಸಂಚಾರಿ ಅಧೀಕ್ಷಕ ಅಧಿಕಾರಿ ಆಗಿ ನಟಿಸುತ್ತಿದ್ದ ಓರ್ವನನ್ನು ಇಲ್ಲಿನ ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸುಬೇದಾರ್ ಪಾಳ್ಯದ ನೂರ್ ಅಹ್ಮದ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಹಳೆಯ ಸಹಾಯಕ ಸಂಚಾರಿ ಅಧೀಕ್ಷಕರ ವರ್ಗಾವಣೆಯಾಗಿದೆ. ನಾನೇ ಹೊಸ ಸಹಾಯಕ ಸಂಚಾರಿ ಅಧೀಕ್ಷಕ ಎಂದು ನೂರ್ ಅಹ್ಮದ್ ಹೇಳಿಕೊಂಡಿದ್ದ. ಯಶವಂತಪುರದ ಬಿಎಂಟಿಸಿ ಘಟಕಕ್ಕೆ ಭೇಟಿ ನೀಡಿದ ವೇಳೆ ಆರೋಪಿ ಹೀಗೆ ಹೇಳಿಕೊಂಡಿದ್ದ ಎನ್ನಲಾಗಿದೆ.

ನೂರ್ ಅಹ್ಮದ್ ವೇಷಭೂಷಣ ಕಂಡು ಅಸಲಿ ಸಹಾಯಕ ಸಂಚಾರಿ ಅಧೀಕ್ಷಕ ಇರಬಹುದು ಎಂದು ಅಧಿಕಾರಿಗಳೂ ಸಹ ಒಮ್ಮೆಲೆ ಸುಮ್ಮನಾಗಿದ್ದಾರೆ. ಬಳಿಕ ಅಸಲಿ ಸಂಗತಿ ಬಯಲಾಗಿದೆ. ಈ ವೇಳೆ ಅನುಮಾನ ಬಂದು ಪರಿಶೀಲಿಸಿದಾಗ ಸತ್ಯ ಬೆಳಕಿಗೆ ಬಂದಿದೆ. 
ಈ ಸಂಬಂಧ ಸಹಾಯಕ ಸಂಚಾರಿ ಅಧೀಕ್ಷಕರು ದೂರು ನೀಡಿದ್ದು, ದೂರು ಆಧರಿಸಿ ಆರೋಪಿಯನ್ನು ಸದ್ಯ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News